spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, December 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಸಾಗುವಾನಿ ಮರಗಳ ಅಕ್ರಮ ಸಾಗಾಟ: ಅರಣ್ಯ ಇಲಾಖೆಯಿಂದ ದಾಳಿ, ಇಬ್ಬರ ಬಂಧನ

- Advertisement -Nitte

ಹೊಸ ದಿಗಂತ ವರದಿ, ಮುಂಡಗೋಡ:

ಅರಣ್ಯದಲ್ಲಿದ್ದ ಬೆಲೆಬಾಳುವ ಸಾಗುವಾನಿ ಮರಗಳನ್ನು ಕಡಿದು ಸಾಗಿಸುತ್ತಿದ್ದ ವೇಳೆ ಖಚಿತ ಮಾಹಿತಿ ಪಡೆದ ಅರಣ್ಯ ಇಲಾಖೆಯವರು ಬುಧವಾರ ಬೆಳಗಿನ ಜಾವ ದಾಳಿ ಮಾಡಿ ೮೦ ಸಾವಿರ ಬೆಲೆಬಾಳುವ ತುಂಡುಗಳ ಸಮೇತ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು ಮತ್ತೊಬ್ಬ ಆರೋಪಿ ಪರಾರಿಯಾದ ಘಟನೆ ತಾಲೂಕಿನ ಕಾತೂರ ವಲಯದ ನಾಗನೂರ ಗ್ರಾಮದ ಅರಣ್ಯದಲ್ಲಿ ಜರುಗಿದೆ.
ಕಾತೂರ ಗ್ರಾಮದ ಸುರೇಶ ಬಾಗಿಲದವರ, ಪರಶುರಾಮ (ಫೈಯಾಜ್) ಅಕ್ಸರ್ ಬಂಧಿತ ಆರೋಪಿಯಾಗಿದ್ದಾರೆ. ನಾಗನೂರ ಗ್ರಾಮದ ಸಂಜು ಬದನಗೋಡ ಪರಾರಿಯಾದ ಆರೋಪಿ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಈ ಮೂವರು ಆರೋಪಿಗಳು ನಾಗನೂರ ಅರಣ್ಯದಲ್ಲಿ ಬುಧವಾರ ನಸುಕಿನಲ್ಲಿ ಬೆಲೆ ಬಾಳುವ ಸಾಗುವಾನಿ ಮರಗಳನ್ನುಕಡಿದು ತುಂಡಗಳನ್ನು ಮಾಡಿ ಸಾಗಿಸುತ್ತಿದ್ದಾಗ ಖಚಿತ ಮಾಹಿತಿ ಪಡೆದ ಅರಣ್ಯಾಧಿಕಾರಿಗಳ ತಂಡ ಕಾತೂರ ಮತ್ತು ನಾಗನೂರ ರಸ್ತೆಯ ಹತ್ತಿರ ದಾಳಿ ಮಾಡಿ ಸುಮಾರ ಎಂಬತ್ತು ಸಾವಿರ ರೂಪಾಯಿ ಮೌಲ್ಯದ ಸಾಗುವಾನಿ ತುಂಡುಗಳನ್ನು ವಶಪಡಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನೊಬ್ಬ ಆರೋಪಿ ತಲೆ ಮರಿಸಿಕೊಂಡಿದ್ದು ಆರೋಪಿ ಪತ್ತೆಗಾಗಿ ಅರಣ್ಯ ಇಲಾಖೆ ಸಿಬ್ಬಂದಿಗಳು ಬಲೆ ಬೀಸಿದ್ದೇವೆ ಎಂದು ಕಾತೂರು ಉಪವಲಯ ಅರಣ್ಯಾಧಿಕಾರಿ ತಿಳಿಸಿದರು.
ಕಾತೂರ ವಲಯ ಅರಣ್ಯಧಿಕಾರಿ ಅಜಯ್ ನಾಯ್ಕ ನೇತೃತ್ವದಲ್ಲಿ ಅರಣ್ಯ ಅಧಿಕಾರಿಗಳಾದ ನಾಗರಾಜ್ ಕಲಾಲ, ವಿರೇಶ ಬಿ, ಅರಣ್ಯ ರಕ್ಷಕರಾದ ಮಂಜು, ಬಸವನಗೌಡ, ಸಹದೇವಪ್ಪ ಆರ್, ಶಿವಾನಂದ, ಕೃಷ್ಣಾ ಸೇರಿದಂತೆ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss