ಹೊಸ ದಿಗಂತ ವರದಿ, ಹೊನ್ನಾವರ:
ತಾಲೂಕಿನ ಗುಣವಂತೆಯ ಬೋಳಟ್ಟೆಯಲ್ಲಿ ಅಕ್ರಮವಾಗಿ ಅಡಗಿಸಿಟ್ಟ ಗಾಂಜಾವನ್ನು ಆರೋಪಿಯ ಸಮೇತ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಗುಣವಂತೆಯ ನಿವಾಸಿ ಜಗದೀಶ ಶಂಭು ಗೌಡ ಬಂಧಿತ ಆರೋಪಿ.
ಸುಮಾರು 6 ಸಾವಿರ ರೂ. ಮೌಲ್ಯದ 30 ಗ್ರಾಂ ಗಾಂಜಾವನ್ನು ಮಂಕಿ ಪೊಲೀಸರು ಪತ್ತೆ ಹಚ್ಚಿದ್ದು, ತಾಲೂಕಿನಲ್ಲೂ ಅಕ್ರಮ ಗಾಂಜಾ ಘಾಟು ಹಬ್ಬಿದಂತಾಗಿದೆ.
ಮಂಕಿ ಪೊಲೀಸ್ ಠಾಣೆಯ ಪಿ.ಎಸ್.ಐ ಅಶೋಕ ಮಾಳಾಬಗಿ ಪ್ರಕರಣ ದಾಖಲಿಸಿಕೊಂಡಿದ್ದು ಅಪರಾಧ ವಿಭಾಗದ ಪಿ.ಎಸ್.ಐ ಅಪ್ಪಾಜಿ ಬಿ ಗೊಂದಳಿ ತನಿಖೆ ನಡೆಸುತ್ತಿದ್ದಾರೆ.