ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸ ದಿಗಂತ ವರದಿ, ಭಟ್ಕಳ:
ತರಕಾರಿ ಮತ್ತು ಹಣ್ಣು ಮಾರಾಟದ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 500 ಕೆ.ಜಿ. ಗೋಮಾಂಸವನ್ನು ಪೊಲೀಸರು ಶಿರಾಲಿ ಚೆಕ್ ಪೋಸ್ಟ್ ಬಳಿ ವಶಪಡಿಸಿಕೊಂಡಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿದ್ದಾರೆ.
ಹಾವೇರಿಯ ಹಾನಗಲ್ ನಿವಾಸಿ ಮೌಲಾಲಿ ಬಾಷಾ ಸಾಬ್ ಗೌಸ್ ಮೋಹಿದ್ದೀನ್ ಮತ್ತು ಭಟ್ಕಳದ ಮುಜಫರ್ ಎನ್ನುವವರೇ ಬಂಧಿತ ಆರೋಪಿಗಳಾಗಿದ್ದು ಇವರು ಎಲ್ಲಿಂದಲೋ ಗೋವುಗಳನ್ನು ಕದ್ದು ವಧಿಸಿ, ಸುಮಾರು 1 ಲಕ್ಷ ಮೌಲ್ಯದ ಮಾಂಸ ಹಣ್ಣು ಮಾರಾಟದ ವಾಹನದ ಖಾಲಿ ಟ್ರೇ ಯಲ್ಲಿ ತುಂಬಿ ಸಾಗಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಗ್ರಾಮೀಣ ಪೊಲೀಸ್ ಠಾಣೆ ಎ.ಎಸ್.ಐ ಕೃಷ್ಣಾನಂದ ನಾಯ್ಕ ಪ್ರಕರಣ ದಾಖಲಿಸಿದ್ದಾರೆ.