Friday, August 19, 2022

Latest Posts

“ನಾನು ಖುಷಿಯಿಂದ ಕಳೆಯುವ ವರ್ಕೌಟ್ ಗೆ ಮತ್ತೆ ಮರಳಿದ್ದೇನೆ”

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್‌ಲೈನ್ ಡೆಸ್ಕ್:

ದಿನದಲ್ಲಿ ಹೆಚ್ಚಿನ ಸಮಯವನ್ನು ಜಿಮ್‌ ನಲ್ಲಿಯೇ ವರ್ಕೌಟ್‌ ಮಾಡಿ ಕಳೆಯುವ ಕಲಾವಿದರಿಗೆ ಕೊರೋನಾ ಬಹಳ ದೊಡ್ಡ ಆಘಾತವನ್ನೇ ನೀಡಿತ್ತು. ಜಿಮ್ ಗಳು ಕ್ಲೋಸ್ ಆಗಿದ್ದರಿಂದ ಎಷ್ಟೋ ಜನ ಬೇಸರವಾಗಿದ್ದರು, ಇದರಿಂದ ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಕೂಡ ಹೊರತಲ್ಲ.

ಹೌದು.. ಈ ಬಗ್ಗೆ ಸುದೀಪ್ ಅವರೇ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ. “ನಾನು ಎಂಜಾಯ್‌ ಮಾಡುತ್ತಿದ್ದ ವರ್ಕೌಟ್‌ಗೆ ಮತ್ತೆ ಮರಳುತ್ತಿದ್ದೇನೆ” ಎಂದು ಹೇಳಿದ್ದಾರೆ.

“ಕೋವಿಡ್ ನಿಂದಾಗಿ ತಿಂಗಳುಗಟ್ಟಲೇ ತೊಂದರೆ ಅನುಭವಿಸಿದ್ದು ನಿಜ. ಈಗ ಚೇತರಿಸಿಕೊಂಡಿದ್ದೇನೆ. ಮತ್ತೆ ನಾನು ಖುಷಿಯಿಂದ ಕಳೆಯುವ ವರ್ಕೌಟ್ ಗೆ ಮರಳಿದ್ದೇನೆ. ನನ್ನ ದೈನಂದಿನ ಕಾರ್ಯಕ್ಕೆ ಮರಳುತ್ತಿರುವುದಕ್ಕೆ ಖುಷಿಯಾಗುತ್ತಿದೆ. ಕಷ್ಟದ ಸಮಯದಲ್ಲಿ ನನ್ನ ಜೊತೆ ನಿಂತು ಬೆನ್ನು ತಟ್ಟಿದ ವೈದ್ಯರು, ನನ್ನ ತರಬೇತುದಾರರು,ಕುಟುಂಬ, ಸ್ನೇಹಿತರಿಗೆ ಧನ್ಯವಾದ” ಎಂದು ಸುದೀಪ್ ಟ್ವೀಟರ್ ನಲ್ಲು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!