ನನ್ನ ಸಮಯ ಮುಗಿದಿದೆ: ಮಂಗಳ ಗ್ರಹದಿಂದ ಸಂದೇಶ ಕಳುಹಿಸಿದ ಇನ್ಸೈಟ್ ಲ್ಯಾಂಡರ್

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ಮಂಗಳ ಗ್ರಹವನ್ನು ಅನ್ವೇಷಿಸಲು ನಾಸಾದ ಕಳುಹಿಸಿದ್ದ ಇನ್‌ಸೈಟ್ ಲ್ಯಾಂಡರ್ ಶೀಘ್ರದಲ್ಲೇ ತನ್ನ ಕೆಲಸವನ್ನು ನಿಲ್ಲಿಸಲಿದೆ. ನಾಸಾ ನವೆಂಬರ್ 2018 ರಲ್ಲಿ ಇನ್‌ಸೈಟ್ ಲ್ಯಾಂಡರ್ ಅನ್ನು ಉಡಾವಣೆ ಮಾಡಿತ್ತು.

ಮಂಗಳ ಗ್ರಹದ ಒಳಗಿನ ಕಲ್ಲಿನ ಪದರಗಳ ಸಂಶೋಧನೆ ಮತ್ತು ಅನ್ವೇಷಣೆಗಾಗಿ ನಾಸಾ ಇದನ್ನು ಪ್ರಾರಂಭಿಸಿತು. ಅಂದಿನಿಂದ ಇಲ್ಲಿವರೆಗೆ ಇದು ಪ್ರಮುಖ ಮಾಹಿತಿಯನ್ನು ನೀಡಿದೆ. ಈಗ ಈ ಬಾಹ್ಯಾಕಾಶ ನೌಕೆ ತನ್ನ ಕಾರ್ಯಾಚರಣೆಯನ್ನು ಕೊನೆಗೊಳಿಸಲಿದೆ. ಇದನ್ನು ಸ್ವತಃ ಇನ್ಸೈಟ್ ಲ್ಯಾಂಡರ್ ಬಹಿರಂಗಪಡಿಸಿದ್ದು, “ನನ್ನ ಕೆಲಸವು ಇಲ್ಲಿಗೆ ಕೊನೆಗೊಳ್ಳುತ್ತದೆ. “ನನಗೆ ಶಕ್ತಿ ನೀಡುವ ಸೌರ ಫಲಕಗಳು ಧೂಳಿನ ಕಾರಣದಿಂದಾಗಿ ಕೆಲಸ ಮಾಡಲು ಸಾಕಷ್ಟು ಶಕ್ತಿಯನ್ನು ಪಡೆಯುತ್ತಿಲ್ಲ” ಎಂದು ಇನ್‌ಸೈಟ್ ಲ್ಯಾಂಡರ್ ಸಂದೇಶ ರವಾನಿಸಿದೆ. ವಿದ್ಯುತ್ ಕೊರತೆಯಿಂದ ಯಾವುದೇ ಕ್ಷಣದಲ್ಲಿ ಕೆಲಸ ನಿಲ್ಲಿಸಬಹುದು ಎನ್ನಲಾಗಿದೆ.

ಈ ನೌಕೆ ಇಲ್ಲಿವರೆಗೆ ಮಂಗಳ ಗ್ರಹದಲ್ಲಿ 1,300 ಕ್ಕೂ ಹೆಚ್ಚು ಕಂಪಗಳನ್ನು ಪತ್ತೆ ಮಾಡಿದೆ. ಅಲ್ಲದೆ ಅದಕ್ಕೆ ಸಂಬಂಧಿಸಿದಂತೆ 50ಕ್ಕೂ ಹೆಚ್ಚು ಸ್ಪಷ್ಟ ಸಂಕೇತಗಳನ್ನು ಕಳುಹಿಸಿದೆ. ಇದು ಸುಮಾರು ನಾಲ್ಕು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ಮತ್ತೊಂದೆಡೆ, ಸಂಶೋಧಕರು ಸೌರ ಫಲಕಗಳ ಮೇಲಿನ ಧೂಳನ್ನು ತೆಗೆದುಹಾಕಲು ಪ್ರಯತ್ನಿಸಿದರು. ಆದರೆ, ಅದು ಸಾಧ್ಯವಾಗಲಿಲ್ಲ. ಸೌರ ಫಲಕಗಳಿಂದ ವಿದ್ಯುತ್ ಕೊರತೆಯಿಂದಾಗಿ, ಇನ್‌ಸೈಟ್ ಲ್ಯಾಂಡರ್ ಶೀಘ್ರದಲ್ಲಿ ಕಾರ್ಯನಿಲ್ಲಿಸಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!