‘ನಾನು ಕ್ರಿಮಿನಲ್ ಅಲ್ಲ, ಆಜೀವ ನಿಷೇಧ ಕಠಿಣ’: ನಾಯಕತ್ವದ ನಿಷೇಧದ ಬಗ್ಗೆ ಸಿಡಿದೆದ್ದ ಡೇವಿಡ್ ವಾರ್ನರ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಇತ್ತೀಚೆಗೆ ಆಸ್ಟೇಲಿಯಾ ಸೀಮಿತ ಓವರ್‌ ಕ್ರಿಕೆಟ್‌ ನಾಯಕತ್ವಕ್ಕೆ ದಿಢೀರ್ ರಾಜೀನಾಮೆ‌ ಘೋಷಿಸಿದಾಗ ಮುಂದಿನ ಆಸಿಸ್‌ ನಾಯಕ ಯಾರು ಎಂಬ ಪ್ರಶ್ನೆಗಳು ಉದ್ಭವಿಸಿದ್ದವು. ಬಹುತೇಕ ಕ್ರಿಕೆಟ್‌ ಪಂಡಿತರು ‌ಅನುಭವಿ ಕ್ರಿಕೆಟಿಗ ಡೇವಿಡ್‌ ವರ್ನರ್‌ ಅವರು ಮುಂದಿನ ನಾಯಕರಾಗಿ ಆಯ್ಕೆಯಾಗಲಿದ್ದಾರೆ. ಎಂದು ಊಹಿಸಿದ್ದರು. ಆದರೆ ಕ್ರಿಕೆಟ್‌ ಆಸ್ಟ್ರೇಲಿಯಾ ಹೊಸ ನಾಯಕನನ್ನು ಆಯ್ಕೆ ಮಾಡಿದಾಗ ಎಲ್ಲರ ಲೆಕ್ಕಾಚಾರಗಳು ಉಲ್ಟಾ ಆಗಿದ್ದವು. ಪ್ಯಾಟ್‌ ಕಮಿನ್ಸ್‌ ರನ್ನು ಆಸಿಸ್‌ ನಾಯಕರಾಗಿ ಆಯ್ಕೆ ಮಾಡಿದ್ದು ಹಲವರಿಗೆ ಅಚ್ಚರಿ ತರಿಸಿತ್ತು. ಈ ಬಗ್ಗೆ ಇದೀಗ ಮೌನ ಮುರಿದಿರುವ ವಾರ್ನರ್‌ ಮನದಾಳದ ನೋವನ್ನು ಹೊರಹಾಕಿದ್ದಾರೆ.
2018 ರಲ್ಲಿ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಕೇಪ್ ಟೌನ್ ಬಾಲ್ ಟ್ಯಾಂಪರಿಂಗ್ ಹಗರಣದಲ್ಲಿ ಪಾತ್ರವಹಿಸಿದ್ದು ಸಾಬೀತಾಗಿದ್ದರಿಂದ ಆಸ್ಟ್ರೇಲಿಯದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಯಾವುದೇ ನಾಯಕತ್ವದ ಪಾತ್ರದಿಂದ ಆಜೀವ ನಿಷೇಧಕ್ಕೊಳಗಾದರು. ನಾಲ್ಕು ವರ್ಷಗಳ ನಂತರ ಆಸ್ಟ್ರೇಲಿಯಾ ಏಕದಿನ ಮತ್ತು ಟಿ 20 ಯಲ್ಲಿ ಸೂಕ್ತ ನಾಯಕತ್ವಕ್ಕೆ ಹುಡುಕುತ್ತಿದ್ದರೂ ವಾರ್ನರ್‌ ರನ್ನು ನಿರ್ಲಕ್ಷಿಸಿದೆ.
ಈ ಬಗ್ಗೆ ಆಕ್ರೋಶ ಹೊರಹಾಕಿರುವ 36 ವರ್ಷದ ವಾರ್ನರ್‌, ಪ್ರಕರಣವನ್ನು ಅನಗತ್ಯವಾಗಿ ಎಳೆಯಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಇದು ನನಗೆ ಮತ್ತು ನನ್ನ ಕುಟುಂಬಕ್ಕೆ ಮತ್ತು ನನ್ನೊಂದಿಗಿರುವ ಎಲ್ಲರಿಗೂ ಆಘಾತಕಾರಿಯಾಗಿದೆ” ಎಂದು ವಾರ್ನರ್ ಆಸ್ಟ್ರೇಲಿಯಾದ ಮಾಧ್ಯಮಕ್ಕೆ ತಿಳಿಸಿದರು.
“ನಾನು ಕ್ರಿಮಿನಲ್ ಅಲ್ಲ ಎಂಬ ವಿಚಾರವು ಅಂತಿಮ ಸತ್ಯವಾಗಿದೆ ಎಂದು ನಾನು ಭಾವಿಸುತ್ತೇನೆ. ನೀವು ಕೆಲವು ಹಂತದಲ್ಲಿ ನನ್ನನ್ನು ಸಮರ್ಥಿಸಿಕೊಳ್ಳಲು ನನಗೆ ಅವಕಾಶ ನೀಡಬೇಕಿತ್ತು. ಅವರು ನಿಷೇಧವನ್ನು ಜಾರಿಗೆ ತಂದರು, ಅವರು ಯಾರನ್ನು ಬೇಕಿದ್ದರೂ ನಿಷೇಧಿಸುತ್ತಾರೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ನಾಯಕತ್ವಕ್ಕೆ ನಿರ್ಲಕ್ಷಿಸಿದ ಮೇಲೆ ನನ್ನ ಜೀವನ ಸ್ವಲ್ಪ ಕಠಿಣವಾಗಿದೆ ಎಂದು  ನಾನು ಭಾವಿಸುತ್ತೇನೆ” ಎಂದು ವಾರ್ನರ್‌ ನುಡಿದಿದ್ದಾರೆ.
ಕ್ರಿಕೆಟ್ ಆಸ್ಟ್ರೇಲಿಯಾ ತನ್ನ ನೀತಿ ಸಂಹಿತೆಯನ್ನು ತಿದ್ದುಪಡಿ ಮಾಡಿ ವರ್ನರ್‌ ಮೇಲೆನ ಅಜೀವ ನಾಯಕತ್ವ ನಿಶೇಧ ಪರಿಶೀಲಿಸುತ್ತಿದೆ. ಆದರೆ ನಾಯಕನಾಗಿ ಪ್ಯಾಟ್‌ ಕಮಿನ್ಸ್‌ ಉದಯದಿಂದಾಗಿ ವಾರ್ನರ್‌ ಆಸಿಸ್‌ ನಾಯಕನ ಪಾತ್ರ ವಹಿಸುವುದು ಬಹುತೇಕ ಅಸಾಧ್ಯವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!