ಆಟ ಮುಗಿಸಿದ್ದೇನೆ ಹೇಳಲ್ಲ, ಮತ್ತೆ ಬರುತ್ತೇನೆ ಗೊತ್ತಿಲ್ಲ: ಧೋನಿ ನಿವೃತ್ತಿ ಇನ್ನೂ ರಹಸ್ಯ!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಭಾರೀ ಕುತೂಹಲ ಮತ್ತು ಚರ್ಚೆಯಾಗಿದ್ದ ಧೋನಿ ಐಪಿಎಲ್‌ ನಿವೃತ್ತಿ ಇದೀಗ ಮುಂದಿನ ಆವೃತ್ತಿಗೂ ಮುಂದುವರಿದಿದೆ.

ಗುಜರಾತ್‌ ಟೈಟಾನ್ಸ್‌ ವಿರುದ್ಧದ ಪಂದ್ಯದ ಬಳಿಕ ಮಾತನಾಡಿದ ಧೋನಿ ಸದ್ಯ ನಾನು ರಾಂಚಿಗೆ ತೆರಳಿ ಕೆಲವು ಬೈಕ್‌ ಸವಾರಿ ನಡೆಸಿ ಆನಂದಿಸುತ್ತೇನೆ. ಮುಂದಿನ 4-5 ತಿಂಗಳ ಒಳಗೆ, ಕಠಿಣ ಶ್ರಮದ ಒತ್ತಡಕ್ಕೆ ತಮ್ಮ ದೇಹ ಹೇಗೆ ಸ್ಪಂದಿಸುವುದೊ ಅದರ ಆಧಾರದಲ್ಲಿ ತಮ್ಮ ಐಪಿಎಲ್‌ ಭವಿಷ್ಯದ ಬಗ್ಗೆ ನಿರ್ಧಾರ ಮಾಡುವೆ ಎಂದರು.

ಆತುರವಿಲ್ಲ. ದೇಹವನ್ನು ಫಿಟ್ ಆಗಿ ಇಟ್ಟುಕೊಳ್ಳಬೇಕು. ನಾನು ಆಟ ಮುಗಿಸಿದ್ದೇನೆ ಎಂದು ಹೇಳುತ್ತಿಲ್ಲ, ನಾನು ಮತ್ತೆ ಬರುತ್ತೇನೆ ಎಂದು ಹೇಳುತ್ತಿಲ್ಲ. ನನಗೆ ಮುಂದಿನ ಐಪಿಎಲ್‌ ತನಕ ಇನ್ನೂ ಸಮಯವಿದೆ. ಅದರ ಬಗ್ಗೆ ಯೋಚಿಸಿ ನಂತರ ನಿರ್ಧರಿಸುತ್ತೇನೆ ಎಂದು ನಿವೃತ್ತಿ ನಿರ್ಧಾರವನ್ನು ಮತ್ತೆ ರಹಸ್ಯವಾಗಿಯೇ ಇಟ್ಟರು.

ನನ್ನ ಕ್ರಿಕೆಟ್‌ ಬದುಕಿನುದ್ದಕ್ಕೂ ಅಭಿಮಾನಿಗಳ ಪ್ರೀತಿ ಮತ್ತು ಅಕ್ಕರೆ ತಮಗೆ ಲಭಿಸಿದೆ. ಆದರೆ ನನಗೆ ಈಗ 43 ವರ್ಷ ಎಂಬುದನ್ನು ಮರೆಯುವಂತಿಲ್ಲ. ದೀರ್ಘ ಕಾಲದಿಂದ ಆಡುತ್ತಿದ್ದೇನೆ. ಸದ್ಯಕ್ಕೆ ನಿವೃತ್ತಿ ಬಗ್ಗೆ ಯಾವುದೇ ಹೇಳಿಕೆ ನೀಡಲ್ಲ ಎಂದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!