ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………
ಹೊಸದಿಗಂತ ಆನ್ ಲೈನ್ ಡೆಸ್ಕ್:
ಐಎಂಎ ವಂಚನೆ ಕೇಸ್ಗೆ ಸಂಬಂಧಿಸಿದಂತೆ ಆರೋಪಿ ರೋಷನ್ ಬೇಗ್ ಆಸ್ತಿ ಜಪ್ತಿಗೆ ಸರ್ಕಾರ ವಿಳಂಬ ಮಾಡುತ್ತಿರುವುದಕ್ಕೆ ಹೈಕೋರ್ಟ್ ಗರಂ ಆಗಿದೆ.
ಆಸ್ತಿ ಜಪ್ತಿ ವಿಳಂಬಕ್ಕೆ ಸರ್ಕಾರ ಲಾಕ್ಡೌನ್ ಕಾರಣ ಕೊಟ್ಟಿದ್ದು ಇದನ್ನ ಒಪ್ಪದ ಹೈಕೋರ್ಟ್ ನ್ಯಾಯಪೀಠ, ಲಾಕ್ಡೌನ್ಗೂ ಜಪ್ತಿ ವಿಳಂಬಕ್ಕೂ ಸಂಬಂಧವಿಲ್ಲ. ಆಸ್ತಿಗಳನ್ನು ಪರಭಾರೆ ಮಾಡಿದರೆ ಯಾರು ಹೊಣೆ? ರಾಜಕಾರಣಿ ಎಂಬ ಕಾರಣಕ್ಕೆ ಜಪ್ತಿ ವಿಳಂಬ ಎಂಬ ಆರೋಪವಿದೆ.ಸರ್ಕಾರ ಆಸ್ತಿಜಪ್ತಿಗೆ ಹಿಂಜರಿಯುತ್ತಿದೆ. ಸೂಚನೆ ನೀಡಿದ್ದರೂ ಜಪ್ತಿಗೆ ಕ್ರಮ ಕೈಗೊಂಡಿಲ್ಲ ಎಂದಿದೆ.
ಒಂದು ವಾರದೊಳಗೆ ಜಪ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಖಡಕ್ ಆದೇಶ ಕೊಟ್ಟಿದೆ. ಈ ವೇಳೆ ಕೋರ್ಟ್ಗೆ ಸಿಬಿಐ ಎಸ್ಪಿ ಪ್ರಸನ್ನ ಕುಮಾರ್ ಹೇಳಿಕೆ ನೀಡಿದ್ದು, ರೋಷನ್ ಬೇಗ್ ವಿರುದ್ಧ ಆರೋಪ ಪಟ್ಟಿ ದಾಖಲಿಸಲಾಗಿದ್ದು, ಐಎಂಎ ಪ್ರಕರಣದಲ್ಲಿ ಸಿಬಿಐ ತನಿಖೆ ಮುಕ್ತಾಯವಾಗಿದೆ ಎಂದು ಹೇಳಿದ್ದಾರೆ.