ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, May 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಬೆಳಗ್ಗೆ ಎದ್ದ ತಕ್ಷಣ ಬಿಸಿ ನೀರಿನಿಂದ ಸ್ನಾನ ಮಾಡ್ತೀರಾ? ಇನ್ಮುಂದೆ ತಣ್ಣೀರಿನಿಂದ ಸ್ನಾನ ಮಾಡಿ… ಏಕೆ ಗೊತ್ತಾ?

ತಣ್ಣೀರಿನಿಂದ ಸ್ನಾನ ಮಾಡುವುದು ನಮಗೆ ಅಲರ್ಜಿ. ಬಿಸಿ ಬಿಸಿ ಹೊಗೆ ಆಡುವ ನೀರಿನಲ್ಲಿಯೇ ಸ್ನಾನ ಮಾಡಿ ಅಭ್ಯಾಸ. ನೀರು ಬಿಸಿ ಇಲ್ಲದಿದ್ದರೆ ಸ್ನಾನ ಮಾಡದೇ ಇರುತ್ತೇವೆಯೇ ಹೊರತು ತಣ್ಣೀರಿನಲ್ಲಂತೂ ಸ್ನಾನ ಮಾಡುವುದಿಲ್ಲ. ಆದರೆ ತಣ್ಣೀರಿನಿಂದ ಸ್ನಾನ ಮಾಡಿದರೆ ಆರೋಗ್ಯದ ಮೇಲಾಗುವ ಲಾಭ ಒಂದೆರಡಲ್ಲ.  ಇಲ್ಲಿದೆ ಮಾಹಿತಿ.

ರಕ್ತದ ಚಲನೆ:
ರಕ್ತದ ಚಲನೆ ಸರಾಗವಾಗಿರುತ್ತದೆ. ಹೃದಯ ಆರೋಗ್ಯವಾಗಿರುತ್ತದೆ.ಬಿಸಿ ನೀರು ಮತ್ತು ತಣ್ಣೀರನ್ನು ಸೇರಿಸಿಕೊಂಡು ಸ್ನಾನ ಮಾಡಿದರೆ ರಕ್ತ ಚಲನೆ ಮತ್ತಷ್ಟು ಸರಾಗವಾಗಿ ಆಗುತ್ತದೆ.

ಒತ್ತಡ, ಖಿನ್ನತೆ:
ಒತ್ತಡ, ಖಿನ್ನತೆಯನ್ನು ತಣ್ಣೀರು ಸ್ನಾನ ಕಡಿಮೆ ಮಾಡುತ್ತದೆ. ನೀವು ಒತ್ತಡದಲ್ಲಿ, ಖಿನ್ನತೆಯಲ್ಲಿ ಇದ್ದಾಗ ತಣ್ಣೀರು ಸ್ನಾನ ಮಾಡಿ. ಮನಸ್ಸು ಶಾಂತವಾಗುತ್ತದೆ.

ಉಸಿರಾಟದ ಸಮಸ್ಯೆ:
ಉಸಿರಾಟದ ಸಮಸ್ಯೆ ಇರುವವರು ನಿತ್ಯ ತಣ್ಣೀರು ಸ್ನಾನ ಮಾಡಬೇಕು. ಏಕೆಂದರೆ ತಣ್ಣೀರು ಸ್ನಾನ ಮಾಡುವಾಗ  ದೀರ್ಘ ಉಸಿರಾಟಮಾಡುತ್ತೇವೆ. ಇದರಿಂದ ದೇಹಕ್ಕೆ ಹೆಚ್ಚಿನ ಆಮ್ಲಜನಕ ಸಿಗುತ್ತದೆ.

ತೂಕ ಇಳಿಕೆ:
ತೂಕ ಇಳಿಸುವ ಆಲೋಚನೆ ಇರುವವರು ನಿತ್ಯ ತಣ್ಣೀರು ಸ್ನಾನವನ್ನು ಮಾಡಿ ಏಕೆಂದರೆ ತಣ್ಣೀರು ಸ್ನಾನ ದೇಹದಲ್ಲಿ ಬ್ರೌನ್ ಫ್ಯಾಟ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಈ ಫ್ಯಾಟ್ ಗಳು ಗ್ಲೂಕೋಸ್ ಗಳನ್ನು ಬಳಸಿಕೊಂಡು ಶಕ್ತಿಯನ್ನು ಉತ್ಪಾದಿಸುತ್ತದೆ. ಈ ಮೂಲಕ ತೂಕ ಇಳಿಕೆಯಾಗುತ್ತದೆ.

ದೇಹದ ಉಷ್ಣತೆ:
ತಣ್ಣೀರು ಸ್ನಾನ ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ. ಕೈ, ಕಾಲುಗಳು ವಿಪರೀತವಾಗಿ ಬೆವರುತ್ತಿದ್ದರೂ ತಣ್ಣೀರು ಸ್ನಾನ ಮಾಡಿದರೆ ಕಡಿಮೆ ಆಗುತ್ತದೆ.

ರೋಗ ನಿರೋಧಕ ಶಕ್ತಿ:
ತಣ್ಣೀರು ಸ್ನಾನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಜ್ವರ, ನೆಗಡಿಯಂಥ ಕಾಯಿಲೆ ಬರದಂತೆ ಕಾಪಾಡುತ್ತದೆ.

ಸಿಟ್ಟು:
ಅತಿಯಾಗಿ ಸಿಟ್ಟು ಬಂದಾಗ ತಣ್ಣೀರು ಸ್ನಾನ ಮಾಡಿದರೆ ಸಿಟ್ಟು ಕಡಿಮೆ ಆಗುತ್ತೆ. ಮಕ್ಕಳು ಬಹಳ ಹಠ ಮಾಡುತ್ತಿದ್ದರೆ ಅವರಿಗೆ ತಣ್ಣೀರು ಸ್ನಾನ ಮಾಡಿಸಿ ಹಠ ನಿಲ್ಲುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss