spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಅಫ್ಘಾನಿಸ್ತಾನದ ಬೆಳವಣಿಗೆಯಿಂದ ಭಾರತ ಸಹಿತ ನೆರೆಯ ರಾಷ್ಟ್ರಗಳ ಮೇಲೆ ಪರಿಣಾಮ: ಪ್ರಧಾನಿ ಮೋದಿ ಆತಂಕ

- Advertisement -Nitte

ಹೊಸದಿಗಂತ ಆನ್ ಲೈನ್ ಡೆಸ್ಕ್:

ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಇತ್ತೀಚಿನ ಬೆಳವಣಿಗೆ ಭಾರತದಂತಹ ನೆರೆಯ ರಾಷ್ಟ್ರಗಳ ಮೇಲೆ ಹೆಚ್ಚಿನ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆತಂಕ ವ್ಯಕ್ತಪಡಿಸಿದರು.
ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ಎಲ್ಲರನ್ನೂ ಒಳಗೊಂಡ ಸರ್ಕಾರ ರಚನೆ ಮಾಡಿಲ್ಲ. ಯಾವುದೇ ಮಾತುಕತೆ, ಕ್ರಮದ ಮೂಲಕ ಜಾರಿಗೆ ಬಂದ ಸರ್ಕಾರವೂ ಇದಲ್ಲ. ನಿರಂತರವಾಗಿ ಪೂರೈಕೆಯಾದ ಮಾದಕವ್ಯಸನಗಳು, ಅಕ್ರಮ ಶಸ್ತ್ರಾಸ್ತ್ರಗಳು, ಮಾನವ ಕಳ್ಳಸಾಗಣೆಗಳು ಅಫ್ಘಾನಿಸ್ತಾನದ ಈ ಎಲ್ಲ ಬೆಳವಣಿಗೆಗಳಿಗೆ ಕಾರಣ ಎಂದು ಮೋದಿ ಇಂದಿನ ಶೃಂಗಸಭೆಯಲ್ಲಿ ವ್ಯಾಖ್ಯಾನಿಸಿದರು.
ವಿಡಿಯೋ ಕಾನ್ಫರೆನ್ಸ್​ ಮೂಲಕ ಎಸ್ಒಸಿ ವಾರ್ಷಿಕ ಶೃಂಗಸಭೆಯಲ್ಲಿ ಭಾಗಿಯಾಗಿ ಮಾತನಾಡಿರುವ ಪ್ರಧಾನಿ, ಅಫ್ಘಾನಿಸ್ತಾನದಲ್ಲಿನ ಇತ್ತೀಚಿನ ಬೆಳವಣಿಗೆ ನಡೆಯಲು ಶಾಂತಿ, ಭದ್ರತೆ ಹಾಗೂ ವಿಶ್ವಾಸದ ಕೊರತೆ ಮುಖ್ಯವಾಗಿದ್ದು, ಇದಕ್ಕೆ ಮುಖ್ಯ ಕಾರಣವೇ ಉಗ್ರವಾದ ಎಂದಿದ್ದಾರೆ.
ಅಮೆರಿಕ ಸೇನೆ ಅಫ್ಘಾನಿಸ್ತಾನ ತೊರೆದ ನಂತರ ಹೆಚ್ಚಿನ ಪ್ರಮಾಣದ ಸುಧಾರಿತ ಶಸ್ತ್ರಾಸ್ತ್ರಗಳು ಅಲ್ಲಿ ಉಳಿದುಕೊಂಡಿದ್ದು, ಇದರಿಂದ ಇಡೀ ಜಗತ್ತಿಗೆ ಅಸ್ಥಿರತೆ ಅಪಾಯ ಉಂಟು ಮಾಡುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ಜಗತ್ತಿನಲ್ಲಿನ ಉಗ್ರವಾದ ಹಾಗೂ ತೀವ್ರವಾದದಿಂದ ಉಂಟಾಗಿರುವ ಸವಾಲನ್ನು ಸಮರ್ಥವಾಗಿ ನಿಭಾಯಿಸಲು ಅನುಕೂಲವಾಗುವ ರೀತಿಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳುವ ಅವಶ್ಯಕತೆ ಇದೆ ಎಂದು ಪ್ರಧಾನಿ ಮೋದಿ ಶಾಂಘೈ ಸಹಕಾರ ಸಭೆಯಲ್ಲಿ ಮನವಿ ಮಾಡಿದರು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss