Monday, July 4, 2022

Latest Posts

ಕಲಬುರಗಿ ಗಡಿಯಲ್ಲಿ ಆಗುತ್ತಿಲ್ಲ ಕೋವಿಡ್‌ ಬಿಗಿ ತಪಾಸಣೆ ಆದೇಶದ ಅನುಷ್ಠಾನ

ಹೊಸ ದಿಗಂತ ವರದಿ, ಕಲಬುರಗಿ:

ಕೊರೋನಾ ರೂಪಾಂತರಿ ಓಮಿಕ್ರಾನ್ ಆತಂಕ ಹಿನ್ನಲೆಯಲ್ಲಿ ರಾಜ್ಯದ ಎಲ್ಲ ಗಡಿ ಬಾಗದ ಜಿಲ್ಲೆಗಳಲ್ಲಿ ಕಟ್ಟೆಚ್ಚರವಹಿಸುವಂತೆ ರಾಜ್ಯ ಸರ್ಕಾರ ಸೂಚಿಸಿದೆ. ಆದರೆ, ಕಲಬುರಗಿ ಗಡಿಯಲ್ಲಿ ಹೆಸರಿಗೆ ಮಾತ್ರ ಚೆಕ್ ಪೋಸ್ಟ್ ನಿರ್ಮಾಣ ಮಾಡಲಾಗಿದೆ.

ಕೊರೋನಾ ರೂಪಾಂತರಿ ಓಮಿಕ್ರಾನ್ ಆತಂಕ ಶುರುವಾಗಿ, ಜನರಲ್ಲಿ ಭಯ ಹುಟ್ಟಿಸುವಂತೆ ಮಾಡಿದೆ. ಹೀಗಾಗಿ ರಾಜ್ಯ ಸರ್ಕಾರ ಗಡಿ ಭಾಗದ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಮಾರ್ಗಸೂಚಿ ಹೊರಡಿಸಿದೆ. ಆದರೆ, ಕಲಬುರಗಿ ಜಿಲ್ಲೆಯ ಆಳಂದ,ನ ಖಜೂರಿ ಬಳಿ ಚೆಕ್ ಪೋಸ್ಟ್ ನಿರ್ಮಾಣ ಮಾಡಲಾಗಿದೆ. ಆದರೆ, ಅದು ಕಾಟಾಚಾರಕ್ಕೆ ಎಂಬತೆ ಗೋಚರಿಸುತ್ತಿದೆ‌‌.

ಮಹಾರಾಷ್ಟ್ರದಿಂದ ಬಿಂದಾಸ್ ಆಗಿ ವಾಹನಗಳು ರಾಜ್ಯಕ್ಕೆ ಬರುತ್ತಿವೆ.ಚೆಕ್ ಪೋಸ್ಟ್ ,ನಲ್ಲಿ ಕೇವಲ ಒಬ್ಬ ಪೊಲೀಸ್ ಸಿಬ್ಬಂದಿಯನ್ನು ಮಾತ್ರ ನಿಯೋಜನೆ ಮಾಡಲಾಗಿದೆ.

ಆರೋಗ್ಯ ಸಿಬ್ಬಂದಿಗಳಾಗಲಿ ಹಿರಿಯ ಅಧಿಕಾರಿಗಳು ಯಾರೊಬ್ಬರೂ ಇಲ್ಲಿ ಕಾಣಿಸುತ್ತಿಲ್ಲ. ಹೀಗಾಗಿ ಚೆಕ್ ಪೊಸ್ಟ್ ನಲ್ಲಿ ಹೇಳೊರು ಇಲ್ಲ, ಕೆಳೋರು ಇಲ್ಲ ಎಂಬಂತಾಗಿದೆ.

ಇದರಿಂದ ಜಿಲ್ಲಾಡಳಿತದ ನಿರ್ಲಕ್ಷ್ಯ ಎದ್ದು ಕಾಣಿತ್ತಿದೆ. ರಾಜ್ಯ ಸರ್ಕಾರದ ಸೂಚನೆಯ ಬಳಿಕವು ಜಿಲ್ಲಾಡಳಿತ ಎಚ್ಚೆತ್ತುಕೊಳ್ಳದಿರುವುದು ಸ್ಥಳಿಯರ ಆಕ್ರೋಶಕ್ಕೆ ಕಾರಣವಾಗಿದೆ‌.

ಕಳೆದ ಬಾರಿ ಮಹಾರಾಷ್ಟ್ರದಿಂದ ಅತಿ ಜನ ಆಗಮಿಸಿದರಿಂದಲೆ ಕೊರೊನಾ ಸ್ಪೋಟಗೊಂಡು ನಿಯಂತ್ರಣಕ್ಕೆ ತರಲಾಗದೆ ಹಲವು ಸಾವುನೋವುಗಳನ್ನು ಅನುಭವಿಸಬೇಕಾದ ಅನಿವಾರ್ಯತೆ ಎದುರಾಗಿತ್ತು. ಈಗಲೂ ಸಹ ಜಿಲ್ಲಾಡಳಿತ ನಿರ್ಲಕ್ಷ್ಯ ತೋರಿದರೆ ಮತ್ತರ ಜಿಲ್ಲೆಗೆ ಗಂಡಾಂತರ ತಪ್ಪದು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss