ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………
ಹೊಸದಿಗಂತ ಆನ್ ಲೈನ್ ಡೆಸ್ಕ್:
ಕೊರೋನಾ ಸಂಬಂಧಿತ ಪರಿಹಾರ ಸಾಮಗ್ರಿಗಳ ಆಮದಿಗೆ ಮೂಲ ಕಸ್ಟಮ್ಸ್ ಸುಂಕ ಹಾಗೂ ಆರೋಗ್ಯ ಸೆಸ್ ಗೆ ಕೇಂದ್ರ ಸರ್ಕಾರ ತಾತ್ಕಾಲಿಕ ವಿನಾಯಿತಿ ನೀಡಿದೆ.
ಈ ಸಂಬಂಧ ಸಚಿವಾಲಯ ಅಧಿಸೂಚನೆ ಹೊರಡಿಸಿದ್ದು ‘ಕೋವಿಡ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕೋವಿಡ್ ಸಂಬಂಧಿತ ಪರಿಹಾರ ಸಾಮಗ್ರಿಗಳ ಆಮದಿಗೆ ಮೂಲ ಕಸ್ಟಮ್ಸ್ ಸುಂಕ ಹಾಗೂ ಆರೋಗ್ಯ ಸೆಸ್ ಗೆ ತಾತ್ಕಾಲಿಕ ವಿನಾಯಿತಿ ನೀಡಿದೆ’ ಎಂದು ಹೇಳಿದೆ.
ಈ ವಿನಾಯಿತಿ ತಾತ್ಕಾಲಿಕ ಮತ್ತು ಜೂನ್ 30, 2021 ರವರೆಗೆ ಮಾಡಿದ ಎಲ್ಲಾ ನಿರ್ದಿಷ್ಟ ಆಮದುಗಳಿಗೆ ಅನ್ವಯಿಸುತ್ತದೆ. ಈ ವಿನಾಯಿತಿಯು ಈಗಾಗಲೇ ಆಮದು ಮಾಡಿಕೊಂಡ ಸರಕುಗಳನ್ನು ಒಳಗೊಳ್ಳುತ್ತದೆ ಆದರೆ ವಿನಾಯಿತಿ ನೀಡಲು ಪ್ರಾರಂಭವಾಗುವ ದಿನಾಂಕ ಯಾವುದೆಂದು ಸ್ಪಷ್ಟವಾಗಿಲ್ಲ.
In view of the COVID-19 pandemic, the Central Government has issued notifications exempting Basic Customs Duty and/or Health cess on imports of a number of COVID-19 related relief materials, for a limited period: Ministry of Finance pic.twitter.com/svz43GG2ej
— ANI (@ANI) May 3, 2021