ಬಿಹಾರ ಸರಕಾರದಿಂದ ಮಹತ್ವದ ನಿರ್ಧಾರ: ರಾಜ್ಯದಲ್ಲಿ ಶುರುವಾಗಲಿದೆ ಜಾತಿ ಆಧಾರಿತ ಜನಗಣತಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಮಹತ್ವದ ನಿರ್ಧಾರ ಕೈಗೊಂಡಿದ್ದು,ಅದರ ಭಾಗವಾಗಿ ಶನಿವಾರದಿಂದ ಜಾತಿ ಆಧಾರಿತ ಜನಗಣತಿ ಆರಂಭವಾಗಿದೆ.

ಸರ್ಕಾರದ ಕಲ್ಯಾಣ ಯೋಜನೆಗಳು ಸಮಾಜದಲ್ಲಿನ ದುರ್ಬಲ ವರ್ಗಗಳಿಗೆ ತಲುಪಿಸಲು ಜನಗಣತಿಯಿಂದ ವೈಜ್ಞಾನಿಕವಾಗಿ ಮಾಹಿತಿ ದೊರೆಯಲಿದೆ ಎಂದು ಅವರು ಹೇಳಿದ್ದಾರೆ.

ಬಿಹಾರದಾದ್ಯಂತ ಎರಡು ಹಂತಗಳಲ್ಲಿ ಜಾತಿ ಆಧಾರಿತ ಜನಗಣತಿ ನಡೆಸಲಾಗುತ್ತಿದೆ. ಮೊದಲ ಹಂತದಲ್ಲಿ ಎಲ್ಲಾ ಮನೆಗಳ್ಳಲೂ ತಲೆ ಎಣಿಕೆ ನಡಸಲಾಗುವುದು, ಇದು ಜನವರಿ 21ರವರೆಗೂ ಮುಂದುವರೆಯಲಿದೆ. ಮಾರ್ಚ್ ನಿಂದ ಎರಡನೇ ಹಂತ ಆರಂಭವಾಗಲಿದೆ ಎಂದು ಎಂದು ಪಾಟ್ನಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಚಂದ್ರಶೇಖರ್ ಸಿಂಗ್ ತಿಳಿಸಿದ್ದಾರೆ.

ಎಲ್ಲಾ ಜಾತಿಗಳು, ಉಪ ಜಾತಿಗಳು, ಧರ್ಮಗಳ ಮಾಹಿತಿ ಕಲೆ ಹಾಕಲಾಗುವುದು, ಎಲ್ಲಾ ಜನರ ಆರ್ಥಿಕ ಸ್ಥಿತಿಗತಿ ಕುರಿತು ಸಮಗ್ರ ಮಾಹಿತಿ ಸಂಗ್ರಹಿಸಲಾಗುವುದು ಎಂದು ಅಧಿಕಾರಿ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!