ಸರ್ಕಾರದ ಮಹತ್ವದ ಆದೇಶ: ಬೀದರ್ ಜಿಲ್ಲೆಯ ನೂತನ ಅಪರ ಜಿಲ್ಲಾಧಿಕಾರಿಯಾಗಿ ಸುರೇಖಾ ನೇಮಕ

ಹೊಸದಿಗಂತ ವರದಿ ಬೀದರ್: ಬೀದರ್‌ ಜಿಲ್ಲೆಯ ನೂತನ ಅಪರ ಜಿಲ್ಲಾಧಿಕಾರಿಯಾಗಿ ಹಾಗೂ ಅಪರ ಜಿಲ್ಲಾದಂಡಾಧಿಕಾರಿಯಾಗಿ ಕೆಎಎಸ್ ಸುರೇಖಾ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶಿಸಿದೆ. ಕಲಬುರಗಿಯ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (KKRDB) ಉಪ ಕಾರ್ಯದರ್ಶಿಯಾಗಿದ್ದ ಸುರೇಖಾ ಅವರನ್ನು ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣ ಜಾರಿಗೆ ಬರುವಂತೆ ಹಿಂದಿನ ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ.ಕರಾಳೆ ಅವರ ಜಾಗಕ್ಕೆ ವರ್ಗಾಯಿಸಿ ಸರ್ಕಾರದ ಅಧೀನ ಕಾರ್ಯದರ್ಶಿ ಕೇಶವಪ್ರಸಾದ್‌ ಕೆ.ಎಚ್ ಆ.5ರಂದು ‌ಈ ಆದೇಶ ಹೊರಡಿಸಿದ್ದಾರೆ. ಬೀದರ್‌ ವಿಶ್ವವಿದ್ಯಾಲಯ ಕುಲಸಚಿವರಾಗಿದ್ದ ಸುರೇಖಾ … Continue reading ಸರ್ಕಾರದ ಮಹತ್ವದ ಆದೇಶ: ಬೀದರ್ ಜಿಲ್ಲೆಯ ನೂತನ ಅಪರ ಜಿಲ್ಲಾಧಿಕಾರಿಯಾಗಿ ಸುರೇಖಾ ನೇಮಕ