ನನ್ನನ್ನು 10 ವರ್ಷಗಳ ಕಾಲ ಜೈಲಿನಲ್ಲಿಡಲು ಪಾಕ್ ಸೇನೆ ಷಡ್ಯಂತ್ರ-ಇಮ್ರಾನ್‌ ಖಾನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದೇಶದ್ರೋಹದ ಅಪರಾಧದ ಅಡಿಯಲ್ಲಿ ಮುಂದಿನ ಹತ್ತು ವರ್ಷಗಳ ಕಾಲ ಜೈಲಿನಲ್ಲಿರಿಸಲು ಪಾಕಿಸ್ತಾನಿ ಮಿಲಿಟರಿ ಷಡ್ಯಂತ್ರ ನಡೆಸುತ್ತಿದೆ ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸೋಮವಾರ ಹೇಳಿದ್ದಾರೆ.

ಅಲ್ ಖದೀರ್ ಟ್ರಸ್ಟ್‌ಗೆ ಅಕ್ರಮವಾಗಿ ಜಮೀನು ಮಂಜೂರು ಮಾಡಿ 5 ಸಾವಿರ ಕೋಟಿ ರೂ.ಗಳನ್ನು ಲೂಟಿ ಮಾಡಿದ ಆರೋಪದ ಮೇಲೆ ದಾಖಲಾಗಿರುವ ಪ್ರಕರಣದಲ್ಲಿ ಅರೆಸೇನಾ ಪಡೆ ರೇಂಜರ್‌ಗಳು ಇಮ್ರಾನ್ ಖಾನ್ ಅವರನ್ನು ಇದೇ 9 ರಂದು ಬಂಧಿಸಿದ್ದು ಗೊತ್ತೇ ಇದೆ. ಮೂರು ದಿನಗಳ ಹಿಂದೆ ಪಾಕಿಸ್ತಾನ ಸುಪ್ರೀಂ ಕೋರ್ಟ್ ಅವರಿಗೆ ಜಾಮೀನು ನೀಡಿತ್ತು. ಈ ಸಂದರ್ಭದಲ್ಲಿ ಅವರು ಭಾನುವಾರ ರಾತ್ರಿ ಲಾಹೋರ್‌ನಲ್ಲಿ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ಕಾರ್ಯಕರ್ತರನ್ನು ಭೇಟಿ ಮಾಡಿ ಸರಣಿ ಟ್ವೀಟ್‌ಗಳ ಮೂಲಕ ಪಾಕಿಸ್ತಾನ ಸೇನೆ ವಿರುದ್ಧ ಆರೋಪ ಮಾಡಿದ್ದರು.

ತನ್ನ ಪತ್ನಿ ಬುಶ್ರಾ ಬೇಗಂ ಅವರನ್ನು ಜೈಲಿಗೆ ಹಾಕುವ ಮೂಲಕ ಅವಮಾನ ಮಾಡಲು ಬಯಸಿದ್ದರು. ಹಾಗೆಯೇ ಮುಂದಿನ ಹತ್ತು ವರ್ಷಗಳ ಕಾಲ ಅವರನ್ನು ಜೈಲಿನಲ್ಲಿಡಲು ಬಯಸಿದ್ದರು ಎಂದು ಟ್ವೀಟ್ ಮಾಡಿದ್ದಾರೆ. ಅವರನ್ನು ಬಂಧಿಸುವ ಮೂಲಕ ಪಿಟಿಐ ಕಾರ್ಯಕರ್ತರಲ್ಲಿ ಮಾತ್ರವಲ್ಲದೆ ಸಾಮಾನ್ಯ ಜನರಲ್ಲಿಯೂ ಭಯವನ್ನು ಮೂಡಿಸಲು ಹೊರಟಿದ್ದಾರೆ ಎಂದರು.

ಮುಖ್ಯವಾಗಿ ಎರಡು ಪ್ರಕರಣಗಳಿಂದಾಗಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆ ಎರಡು ಪ್ರಕರಣಗಳಲ್ಲಿ ಒಂದು ಅಲ್ ಖದೀರ್ ಟ್ರಸ್ಟ್ ಪ್ರಕರಣ ಮತ್ತು ಇನ್ನೊಂದು ತೋಷಖಾನಾ ಪ್ರಕರಣ. ಈ ಎರಡು ಪ್ರಕರಣಗಳಲ್ಲಿ ಇಮ್ರಾನ್ ಖಾನ್ ಅಕ್ರಮವಾಗಿ ಹಣ ಸಂಗ್ರಹಿಸಿದ್ದಾರೆ ಎಂಬುದು ಪ್ರಮುಖ ಆರೋಪ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!