ಬಹುಮತ ಕಳೆದುಕೊಂಡ ಇಮ್ರಾನ್ ಖಾನ್: ರಾಷ್ಟ್ರವನ್ನುದ್ದೇಶಿಸಿ ಮಾಡಬೇಕಿದ್ದ ಭಾಷಣ ರದ್ದು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರು ರಾಷ್ಟ್ರವನ್ನುದ್ದೇಶಿಸಿ ಮಾಡಿಬೇಕಿದ್ದ ಯೋಜಿತ ಭಾಷಣವನ್ನು ರದ್ದುಗೊಳಿಸಿದ್ದಾರೆ.
ಪಾಕಿಸ್ತಾನದ ಸೇನಾ ಮುಖ್ಯಸ್ಥರು ಮತ್ತು ಇಂಟರ್-ಸರ್ವಿಸಸ್ ಇಂಟೆಲಿಜೆನ್ಸ್ ಮುಖ್ಯಸ್ಥರು ಖಾನ್ ಅವರನ್ನು ಭೇಟಿ ಮಾಡಿದ ನಂತರ ತಮ್ಮ ಭಾಷಣವನ್ನು ರದ್ದುಗೊಳಿಸಿದ್ದಾರೆ.
ಇಮ್ರಾನ್ ಖಾನ್ ಅವರ ಪಕ್ಷ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಅಥವಾ ಪಿಟಿಐನ ಪಾಕಿಸ್ತಾನಿ ಸೆನೆಟರ್ ಫೈಸಲ್ ಜಾವೇದ್ ಖಾನ್ ಅವರು ಟ್ವೀಟ್ ಮಾಡಿ, ಪ್ರಧಾನಿ ಇಂದು ತಮ್ಮ ಭಾಷಣವನ್ನು ರದ್ದುಗೊಳಿಸಿದ್ದಾರೆ ಎಂದು ದೃಢಪಡಿಸಿದ್ದಾರೆ.
ಇತ್ತ ಸಂಸತ್ತಿನ ಅವಿಶ್ವಾಸ ಮತಕ್ಕೆ ಮುಂಚಿತವಾಗಿ ಸರ್ಕಾರದ ಮೈತ್ರಿ ಪಕ್ಷಗಳು ಬೆಂಬಲವನ್ನು ವಾಪಸ್​ ಪಡೆದ ಕಾರಣದಿಂದ ಪಾಕಿಸ್ತಾನ ಪ್ರಧಾನಿ ಇಮ್ರಾನ್​ ಖಾನ್ ಸರ್ಕಾರ ಬಹುಮತ ಕಳೆದುಕೊಂಡಿದೆ .ಹೀಗಾಗಿ ಖಾನ್ ಪ್ರಧಾನಿ ಕುರ್ಚಿಯಿಂದ ಇಳಿಯುವುದು ಬಹುತೇಕ ಖಚಿತವಾಗಿದೆ.
ಸರ್ಕಾರದ ಮಿತ್ರಪಕ್ಷ ಮುತ್ತಾಹಿದ ಖ್ವಾಮಿ ಮೂಮೆಂಟ್​​ನ ವಿರೋಧ ಪಕ್ಷದೊಂದಿಗೆ ಕೈಜೋಡಿಸಿದ್ದು, ಇದರಿಂದ ಇಮ್ರಾನ್ ಖಾನ್ ಸರ್ಕಾರದ ಸಂಖ್ಯಾಬಲ 164 ಸ್ಥಾನಕ್ಕೆ ಕುಸಿತಕಂಡಿದೆ.
ತಮ್ಮ ಸರ್ಕಾರವನ್ನು ಉಳಿಸಿಕೊಳ್ಳಲು ಇಮ್ರಾನ್​ ಖಾನ್​ಗೆ ಕನಿಷ್ಠ 172 ಸಂಸದರ ಬೆಂಬಲ ಬೇಕು. ಆದರೆ ವಿರೋಧ ಪಕ್ಷಕ್ಕೆ 175 ಶಾಸಕರ ಬೆಂಬಲವಿದೆ.
ಈಗಾಗಲೇ ಮುತ್ತಾಹಿದ ಖ್ವಾಮಿ ಮೂಮೆಂಟ್​​ನ ಸೈಯದ್ ಅಮಿನುಲ್ ಹಕ್ ಮತ್ತು ಫರೋಗ್ ನಸೀಮ್ ರಾಜೀನಾಮೆ ನೀಡಿದ ಬಳಿಕ ಬಲೂಚಿಸ್ತಾನ್ ಅವಾಮಿ ಪಕ್ಷದ (ಬಿಎಪಿ) ನಾಯಕ ಖಾಲಿದ್ ಮಾಗ್ಸಿ ಅವರು ಕೂಡ ತಮ್ಮ ಪಕ್ಷವು ಪ್ರಧಾನಿ ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಇ ಇನ್ಸಾಫ್ (ಪಿಟಿಐ) ಸರ್ಕಾರಕ್ಕೆ ನೀಡಿದ ಬೆಂಬಲವನ್ನು ಹಿಂಪಡೆಯಲು ನಿರ್ಧರಿಸಿದೆ. ಈ ಮೂಲಕ ಸರ್ಕಾದ ಮೈತ್ರಿಕೂಟದಿಂದ ಮತ್ತೊಂದು ಪಕ್ಷ ಹೊರ ಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!