ಪೆಟ್ರೋಲ್‌ ದರ ಇಳಿಸಿದ್ದಕ್ಕೆ ಭಾರತವನ್ನು ಹೊಗಳಿದ ಇಮ್ರಾನ್‌ ಖಾನ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಜನಸಾಮಾನ್ಯರಿಗೆ ಒಳಿತುಮಾಡುವ ದೃಷ್ಟಿಯಿಂದ ರಷ್ಯಾದಿಂದ ರಿಯಾಯಿತಿ ದರದಲ್ಲಿ ಪೆಟ್ರೋಲ್‌ ಖರೀದಿಸಿರುವ ಭಾರತದ ನಿರ್ಧಾರವನ್ನು ಪಾಕ್‌ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಶ್ಲಾಘಿಸಿದ್ದಾರೆ. ರಷ್ಯಾದಿಂದ ತೈಲ ಖರೀದಿಸುವ ಕುರಿತು ಅಮೆರಿಕದಿಂ ಒತ್ತಡವಿದ್ದರೂ ಭಾರತ ತೈಲವನ್ನು ಖರೀದಿಸಿ ಜನಸಾಮಾನ್ಯರಿಗೆ ಪರಿಹಾರ ನೀಡಿದೆ ಎಂದು ಟ್ವೀಟ್‌ ಮಾಡಿದ್ದಾರೆ.

“ಕ್ವಾಡ್‌ ನ ಭಾಗವಾಗಿದ್ದರೂ ಭಾರತವನ್ನು ಯುಎಸ್‌ ಒತ್ತಡವನ್ನು ಎದುರಿಸಿ ರಷ್ಯಾದಿಂದ ಕಡಿಮೆ ಬೆಲೆಗೆ ತೈಲ ಖರೀದಿಸಿ ಜನಸಾಮಾನ್ಯರಿಗೆ ಅನೂಕೂಲ ಮಾಡಿದೆ. ಪಾಕಿಸ್ಥಾನ ಸರ್ಕಾರವೂ ಭಾರತದಂತೆ ಸ್ವತಂತ್ರ ವಿದೇಶಾಂಗ ನೀತಿಯ ಮೂಲಕ ಇದನ್ನು ಸಾಧಿಸಲು ಪ್ರಯತ್ನ ಪಡುತ್ತಿದೆ” ಎಂದು ತಮ್ಮ ಟ್ವೀಟರನಲ್ಲಿ ಬರೆದಿಕೊಂಡಿದ್ದು ಪ್ರಸ್ತುತ ಪಾಕಿಸ್ತಾನದ ಆರ್ಥಿಕತೆಯು ತಲೆಯಿಲ್ಲದ ಕೋಳಿಯಂತಾಗಿದೆ ಎಂದು ಟೀಕಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!