ಐಎಂಎಸ್ ಕಾಲೇಜಿನ ಲಿಫ್ಟ್ ಕುಸಿತ: 10 ವಿದ್ಯಾರ್ಥಿಗಳು ಗಾಯ, ಮೂವರ ಸ್ಥಿತಿ ಗಂಭೀರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಉತ್ತರ ಪ್ರದೇಶದ ಗಾಜಿಯಾಬಾದ್‌ನ ಲಾಲ್ಕುವಾನ್ ಬಳಿ ಇರುವ ಐಎಂಎಸ್ ಕಾಲೇಜಿನ ಲಿಫ್ಟ್ ಬುಧವಾರ ಕುಸಿದು ಹತ್ತು ವಿದ್ಯಾರ್ಥಿಗಳು ಗಾಯಗೊಂಡಿದ್ದು, ಅವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ.
ಘಟನೆಯನ್ನು ಅತ್ಯಂತ ಸೂಕ್ಷ್ಮವಾಗಿ ತೆಗೆದುಕೊಂಡ ಮಾತನಾಡಿದ ಜಿಲ್ಲಾಧಿಕಾರಿಗಳು ನಾನು ಮಕ್ಕಳನ್ನು ಭೇಟಿ ಮಾಡಿದ್ದೇನೆ. ಒಟ್ಟು 10 ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದಾರೆ. 9 ಮಕ್ಕಳು ಸಾಮಾನ್ಯ ವಾರ್ಡ್‌ನಲ್ಲಿದ್ದಾರೆ’ ಎಂದು ವಿಜಯ್ ಕುಮಾರ್ ಸಿಂಗ್ ಹೇಳಿದರು.
ಘಟನೆಯ ಕಾರಣವನ್ನು ಕಂಡುಹಿಡಿಯಲು ಸಮಿತಿಯನ್ನು ರಚಿಸಲಾಗುವುದು, ಅದರ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗುವುದು ಎಂದು ಅವರು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!