Wednesday, August 10, 2022

Latest Posts

2010 ರಲ್ಲಿ ಸಂಭವಿಸಿದ ಪುಣೆಯ ಜರ್ಮನ್ ಬೇಕರಿ ಸ್ಫೋಟ ಪ್ರಕರಣ: ಭಟ್ಕಳಕ್ಕೆ ಭೇಟಿ ನೀಡಿದ ಉಗ್ರ ನಿಗ್ರಹ ದಳದ ಅಧಿಕಾರಿಗಳು

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸ ದಿಗಂತ ವರದಿ, ಭಟ್ಕಳ:

ಫೆಬ್ರವರಿ 2010 ರಲ್ಲಿ ಸಂಭವಿಸಿದ ಪುಣೆಯ ಜರ್ಮನ್ ಬೇಕರಿ ಸ್ಪೋಟಕ್ಕೆ ಸಂಬಂಧಿಸಿದಂತೆ ಪುಣೆಯ ಉಗ್ರ ನಿಗ್ರಹ ದಳದ ಅಧಿಕಾರಿಗಳು ಭಟ್ಕಳಕ್ಕೆ ಭೇಟಿ ನೀಡಿ ವಿಚಾರಣೆ ನಡೆಸುತ್ತಿರುವುದಾಗಿ ಮಾಹಿತಿ ಲಭಿಸಿದೆ.
ಎಟಿಎಸ್ ತಂಡದ ಅಧಿಕಾರಿಗಳು ಸ್ಫೋಟ ಕೃತ್ಯಕ್ಕೆ ಸಂಬಂಧಿಸಿದ ಪ್ರಮುಖ ಆರೋಪಿ ರಿಯಾಜ್ ಭಟ್ಕಳ ಸಂಬಂಧಿಗಳು ಮತ್ತು ಆತನ ಸಹೋದರ ಇಕ್ಬಾಲ್ ಭಟ್ಕಳ, ಯಾಸಿನ್ ಭಟ್ಕಳ ಅವರ ಮನೆಗಳಿಗೆ ತೆರಳಿ ವಿಚಾರಣೆ ನಡೆಸಿದ್ದು, ರಿಯಾಜ್ ಭಟ್ಕಳ ಸಂಬಂಧಿಕರು ಭಟ್ಕಳದಲ್ಲಿ ಬೇಕರಿ ನಡೆಸುತ್ತಿರುವ ಸ್ಥಳಕ್ಕೆ ತೆರಳಿ ವಿಚಾರಣೆ ನೆಡೆಸಿರುವುದಾಗಿ ತಿಳಿದು ಬಂದಿದೆ.
ಕುಖ್ಯಾತ ಉಗ್ರರ ಪಟ್ಟಿಯಲ್ಲಿ ಗುರುತಿಸಿಕೊಂಡಿರುವ ರಿಯಾಜ್ ಭಟ್ಕಳ್ ಮತ್ತು ಸಹೋದರರು ಮುಂಬೈನಲ್ಲಿ ಹುಟ್ಟಿ ಬೆಳೆದರೂ ಅವರು ಬೆಂಗಳೂರಿನ ಪಾಸ್ ಪೋರ್ಟ್ ಪಡೆದಿರುವ ಕುರಿತು ಭಟ್ಕಳದಲ್ಲಿರುವ ಸಂಬಂಧಿಕರ ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ.
2010ರ ಫೆಬ್ರವರಿ 13 ರಂದು ಪುಣೆಯ ಜರ್ಮನ್ ಬೇಕರಿ ಸ್ಫೋಟ ದಲ್ಲಿ 16 ಜನ ಮೃತಪಟ್ಟು 65 ಜನರು ಗಾಯಗೊಂಡಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ಜನರನ್ನು ಉಗ್ರ ನಿಗ್ರಹ ದಳದವರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ರಿಯಾಜ್ ಭಟ್ಕಳ, ಇಕ್ಬಾಲ್ ಭಟ್ಕಳ ಸೇರಿದಂತೆ
ಉಗ್ರ ಸಂಘಟನೆಗಳೊಂದಿಗೆ ಗುರುತಿಸಿಕೊಂಡವರು ಸ್ಫೋಟದ ಸಂಚು ನಡೆಸಿರುವುದು ಬಯಲಾಗಿತ್ತು.
ಇದೀಗ ಭಟ್ಕಳದಲ್ಲಿ ಉಗ್ರ ನಿಗ್ರಹ ದಳದವರು ವಿಚಾರಣೆ ನಡೆಸುತ್ತಿರುವ ಸುದ್ದಿ ಭಟ್ಕಳದಲ್ಲಿ ಜನರ ಕುತೂಹಲಕ್ಕೆ ಕಾರಣವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss