ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಅಬುಧಾಬಿಯಲ್ಲಿ ನಡೆದ ಅಪಘಾತದಲ್ಲಿ ಕೇರಳ ಕಣ್ಣೂರಿನ ಮೂಲದ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ ಎಂದು ಗುರುವಾರ ಮಾಧ್ಯಮ ವರದಿ ತಿಳಿಸಿದೆ.
ಮೃತಪಟ್ಟವನನ್ನು ಕಣ್ಣೂರು ಜಿಲ್ಲೆಯ ತಾಲಿಪರಂಬಾ ಬಳಿಯ ನ್ಯೂ ಸ್ಟ್ರೀಟ್ನ ಎಟಿಸಾಲಾಟ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಅಧಿಕಾರಿ ಅಜ್ಮಲ್ ರಶೀದಿ ಮತ್ತು ನಬಿಲಾ ಅವರ ಪುತ್ರ ಇಬಾದ್ ಅಜ್ಮಲ್ (19) ಎಂದು ಗುರುತಿಸಲಾಗಿದೆ.
ಅಬುಧಾಬಿ ಇಂಡಿಯನ್ ಶಾಲೆಯ ಹಳೆಯ ವಿದ್ಯಾರ್ಥಿಯಾಗಿದ್ದ ಇಬಾದ್, ಬ್ರಿಟನ್ನ ಸೌತ್ ವೇಲ್ಸ್ ಕಾರ್ಡಿಫ್ ಕ್ಯಾಂಪಸ್ನಲ್ಲಿ ‘ವೈಮಾನಿಕ ಎಂಜಿನಿಯರಿಂಗ್ ಮತ್ತು ನಿರ್ವಹಣಾ ವ್ಯವಸ್ಥೆ’ ವಿಷಯದಲ್ಲಿ ಪದವಿ ಪಡೆದಿದ್ದರು.