ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಹದಲ್ಲಿ ಚಲನೆಯ ಕೊರತೆಯಿಂದಾಗಿ ಹೊಟ್ಟೆಯ ಕೊಬ್ಬಿನ ಸಮಸ್ಯೆಗೆ ಕಾರಣವಾಗಬಹುದು. ಇದರ ಜೊತೆಗೆ ಅಧಿಕ ತೂಕವು ಅನೇಕ ಜನರ ತೊಂದರೆಯ ಸಮಸ್ಯೆಗಳಲ್ಲಿ ಒಂದಾಗಿದೆ. ಅಸಮರ್ಪಕ ಜೀರ್ಣಕ್ರಿಯೆ, ಹಾರ್ಮೋನ್ ಸಮಸ್ಯೆ, ದೈಹಿಕ ಚಟುವಟಿಕೆಯ ಕೊರತೆ, ಉದ್ಯೋಗದಿಂದ ದೀರ್ಘಕಾಲ ಕುಳಿತುಕೊಳ್ಳುವುದು ಮತ್ತು ದೇಹದಲ್ಲಿನ ಚಲನೆಯ ಕೊರತೆ ಇವೆಲ್ಲವೂ ಹೊಟ್ಟೆಯ ಕೊಬ್ಬಿನ ಸಮಸ್ಯೆಗೆ ಕಾರಣವಾಗುತ್ತದೆ.
ಹೊಟ್ಟೆಯ ಕೊಬ್ಬು ಮತ್ತು ಅಧಿಕ ತೂಕದ ಸಮಸ್ಯೆಗಳನ್ನು ಹೋಗಲಾಡಿಸಲು, ಜೀರಿಗೆ ಮತ್ತು ಓಮು ಕಾಳಿನ ನೀರು ಅದ್ಭುತವಾಗಿ ಕೆಲಸ ಮಾಡುತ್ತದೆ ಎಂದು ಆಯುರ್ವೇದ ತಜ್ಞರು ಸಲಹೆ ನೀಡುತ್ತಾರೆ. ನಾವು ದಿನನಿತ್ಯ ಸೇವಿಸುವ ಆಹಾರವು ದೇಹದಲ್ಲಿ ಸರಿಯಾಗಿ ಜೀರ್ಣಗೊಂಡರೆ, ನಮ್ಮ ಆರೋಗ್ಯವು ಸಾಮಾನ್ಯವಾಗಿರುತ್ತದೆ. ಇಲ್ಲದಿದ್ದರೆ ಹಲವು ಸಮಸ್ಯೆಗಳು ಎದುರಾಗುತ್ತವೆ. ನಿರಂತರವಾಗಿ ಉತ್ತಮ ಜೀರ್ಣಕ್ರಿಯೆಯನ್ನು ಹೊಂದಲು ಜೀರಿಗೆ, ಓಮು ಕಾಳಿನ ನೀರು ತುಂಬಾ ಸಹಕಾರಿ.
ಊಟದ ನಂತರ ಹೊಟ್ಟೆಯಲ್ಲಿ ಉರಿಯುತ್ತಿರುವ ಸಮಸ್ಯೆಯಿಂದ ಬಳಲುತ್ತಿರುವವರು ಊಟದ ನಂತರ ಸ್ವಲ್ಪ ಜೀರಿಗೆ ನೀರು ಕುಡಿದರೆ ಪರಿಹಾರ ಸಿಗುತ್ತದೆ. ಮಲಬದ್ಧತೆ ಸಮಸ್ಯೆಯನ್ನು ನಿವಾರಿಸುತ್ತದೆ. ಈ ನೀರು ಸರಿಯಾದ ರಕ್ತ ಪರಿಚಲನೆಗೆ ಸಹಾಯ ಮಾಡುತ್ತದೆ. ಮೊದಲು ಜೀರಿಗೆ ಮತ್ತು ಓಮು ಕಾಳನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ. ತಣ್ಣಗಾದ ನಂತರ ಸೋಸಿ ಈ ನೀರನ್ನು ಊಟದ ನಂತರ ಅಥವಾ ರಾತ್ರಿ ಊಟದ ಬಳಿಕ ತೆಗೆದುಕೊಳ್ಳಬೇಕು.