ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………
ಹೊಸದಿಗಂತ ಆನ್ ಲೈನ್ ಡೆಸ್ಕ್:
ಖೆ!
ಅಮೆರಿಕದಲ್ಲಿ ಹೊಸ ಆದೇಶ ಜಾರಿಯಾಗಿದ್ದು, ಇನ್ಮುಂದೆ 113 ರಾಷ್ಟ್ರಗಳಿಂದ ನಾಯಿಗಳನ್ನು ತರಿಸಿಕೊಳ್ಳುವುದಕ್ಕೆ ನಿಷೇಧ ಹೇರಿದೆ.
ನಾಯಿಯ ನಿಷೇಧಕ್ಕೆ ಕಾರಣ, ರೇಬೀಸ್ ರೋಗ ಹೆಚ್ಚಾಗಿರುವುದು. ಆದ್ದರಿಂದ ವಿವಿಧ ತಳಿಗಳ ನಾಯಿಗಳನ್ನು ನಿಷೇಧಿಸಲಾಗಿದೆ. ಈ ನಿಬಂಧನೆ ಜುಲೈ 14 ರಿಂದ ಜಾರಿಗೆ ಬರಲಿದೆ ಎಂದು ಅಮೆರಿಕದ ಆರೋಗ್ಯ ಇಲಾಖೆ ಹೇಳಿದೆ.
ಒಂದು ವೇಳೆ , ನಾಯಿಗಳನ್ನು ಆಮದು ಮಾಡಿಕೊಳ್ಳುವುದಿದ್ದರೆ ಅವುಗಳಿಗೆ ಈಗಾಗಲೇ ರೇಬೀಸ್ ಲಸಿಕೆ ಹಾಕಿಸಿರುವ ಕುರಿತು ಪುರಾವೆಯನ್ನು ಒದಗಿಸಬೇಕು ಎಂದು ಷರತ್ತು ವಿಧಿಸಲಾಗಿದೆ.
ಅಮೆರಿಕದ ಆರೋಗ್ಯ ಸಚಿವಾಲಯದ ಈ ಕ್ರಮವನ್ನು ಅಮೆರಿಕದ ಪಶು ವೈದ್ಯಕೀಯ ಸಂಘದ ಅಧ್ಯಕ್ಷ ಡೌಗ್ಲಾಸ್ ಕ್ರಾಟ್ ಸ್ವಾಗತಿಸಿದ್ದಾರೆ ‘ಅಮೆರಿಕಕ್ಕೆ ಆರೋಗ್ಯವಂತಹ ನಾಯಿಗಳನ್ನು ತರಬೇಕು, ಅದರಲ್ಲೂ ವಿಶೇಷವಾಗಿ ನಾಯಿಮರಿಗಳನ್ನು ತರುವಾಗ ಅವುಗಳ ಆರೋಗ್ಯದ ಬಗ್ಗೆ ಎಚ್ಚರಿಕೆವಹಿಸಬೇಕು’ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.