Tuesday, August 9, 2022

Latest Posts

ಅಪಘಾತದಲ್ಲಿ ತಾತ ಮೊಮ್ಮಕ್ಕಳು ಮೃತಪಟ್ಟ ನಿವಾಸಕ್ಕೆ ಎಚ್‌ಡಿಕೆ ಭೇಟಿ: ಸಾಂತ್ವನ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸ ದಿಗಂತ ವರದಿ, ನಾಗಮಂಗಲ:

ಜೆಡಿಎಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದ ಹೊಣಕೆರೆ ಆನಂದ್‌ಕುಮಾರ್ ಮತ್ತು ಇಬ್ಬರ ಮಕ್ಕಳ ಸಾವಿನ ಸುದ್ದಿ ತಿಳಿದು ನಮ್ಮ ಕುಟುಂಬದ ಒಬ್ಬ ಸದಸ್ಯನನ್ನೇ ಕಳೆದುಕೊಂಡಷ್ಟು ಬಹಳ ನೋವಾಗಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರ‌್ವಸಾಮಿ ತಿಳಿಸಿದರು.
ಹೊಣಕೆರೆ ಗ್ರಾಮದಲ್ಲಿ ಮೂವರು ಮೃತದೇಹಗಳ ಅಂತಿಮದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್ಡಿಕೆ, ತೋಟದಲ್ಲಿ ಕೃಷಿ ಚಟುವಟಿಕೆಯನ್ನು ಮುಗಿಸಿಕೊಂಡು ಸೊಸೆ ಮತ್ತು ಇಬ್ಬರ ಮೊಮ್ಮಕ್ಕಳೊಂದಿಗೆ ಸ್ಕೂಟರ್‌ನಲ್ಲಿ ಮನೆಗೆ ಬರುತ್ತಿದ್ದ ವೇಳೆ ನಡೆದಿರುವ ಈ ಅನಾಹುತ ಅತ್ಯಂತ ಧಾರುಣ ಘಟನೆಯಾಗಿದೆ ಎಂದರು.
ಘಟನೆಯಲ್ಲಿ ಮೃತಪಟ್ಟಿರುವ ಎರಡು ಚಿಕ್ಕ ಮಕ್ಕಳನ್ನು ನೋಡಿದರೆ ಕರುಳು ಮಿಡಿಯುತ್ತದೆ. ಅದರಲ್ಲಿ ಒಂದು ಮಗು ಕಣ್ಣು ತೆರೆದಿರುವ ದೃಶ್ಯ ಕಂಡು ದೇವರು ಏಕೆ ಇಷ್ಟು ಚಿಕ್ಕ ವಯಸ್ಸಿನ ಮಕ್ಕಳ ಪ್ರಾಣತೆಗೆದುಕೊಳ್ಳುತ್ತಾನೆ ಎಂದು ಊಸಿಕೊಳ್ಳಲೂ ಆಗುವುದಿಲ್ಲ. ಒಟ್ಟಾರೆ ಈ ಭಾಗದಲ್ಲಿ ನಮ್ಮ ಕುಟುಂಬದ ಮತ್ತು ಜೆಡಿಎಸ್ ಪಕ್ಷದ ಬಗ್ಗೆ ನಿಷ್ಠೆ ಹಾಗೂ ಅಭಿಮಾನವನ್ನು ಬೆಳೆಸಿಕೊಂಡಿದ್ದ ಒಬ್ಬ ಪ್ರಾಮಾಣಿಕ ಕಾರ್ಯಕರ್ತನನ್ನು ಕಳೆದುಕೊಂಡಿರುವುದು ಪಕ್ಷಕ್ಕೆ ಕೆಟ್ಟ ದುರಂತ. ತಲೆಗೆ ತೀವ್ರ ಪೆಟ್ಟಾಗಿರುವ ಎರಡು ಮಕ್ಕಳ ತಾಯಿ ಅತಿ ಶೀಘ್ರದಲ್ಲಿ ಚೇತರಿಸಿಕೊಳ್ಳಲಿ. ಇಂತಹ ಧಾರುಣ ಪರಿಸ್ಥಿತಿ ಯಾವುದೇ ಕುಟುಂಬಕ್ಕೆ ಬಾರದಿರಲಿ. ಮೃತರ ಆತ್ಮಕ್ಕೆ ಶಾಂತಿ ಸಿಗುವ ಜೊತೆಗೆ ಕುಟುಂಬಸ್ಥರಿಗೆ ಮತ್ತು ಬಂಧುಗಳಿಗೆ ದುಃಖ ಸಹಿಸಿಕೊಳ್ಳುವ ಶಕ್ತಿಯನ್ನು ದೇವರು ನೀಡಲಿ ಎಂದು ತಿಳಿಸಿದರು.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss