ಅಂಕೋಲಾದಲ್ಲಿ ಕೋಮಾರಪಂಥ ಸಮಾಜದವರ ಸುಗ್ಗಿ ಕುಣಿತ ಆರಂಭ!

ಹೊಸದಿಗಂತ ವರದಿ, ಅಂಕೋಲಾ:

ತಾಲೂಕಿನ ನದಿಭಾಗ, ಬೊಬ್ರವಾಡ,ಹೊನ್ನಗುಡಿ ಮತ್ತು ಶೇಡಿಕುಳಿ ಗ್ರಾಮಗಳ ಕ್ಷತ್ರಿಯ ಕೋಮಾರಪಂಥ ಸಮಾಜದವರ ಸುಗ್ಗಿ ಕುಣಿತ ಆರಂಭವಾಗಿದೆ.
ಗುರುವಾರ ಮದ್ಯಾಹ್ನ ಹಕ್ಕುದಾರರ ಮನೆಯಿಂದ ಸುಗ್ಗಿ ತುರಾಯಿಗಳನ್ನು ಧರಿಸಿ ಕುಣಿತ ಆರಂಭಿಸಲಾಗಿದ್ದು ಬೊಬ್ರವಾಡದ ಬೊಬ್ರದೇವಸ್ಥಾನ, ಪಳ್ಳಿದೇವಸ್ಥಾನ ಗ್ರಾಮ ದೇವತೆ ಶ್ರೀ ಶಾಂತಾದುರ್ಗಾ ದೇವಸ್ಥಾನ,ಬಂಡಿ ಬಾಜಾರದ ಮಾಹಾಸತಿ ದೇವಾಲಯ, ಮಠಾಕೇರಿ ಕುಂಡೋದರಿ ದೇವಸ್ಥಾನ, ವೀರ ವಿಠ್ಠಲ ದೇವಾಲಯಗಳಲ್ಲಿ ಸುಗ್ಗಿ ಕುಣಿತ ನಡೆಸಲಾಯಿತು.
ತಾಲೂಕಿನ ವಿವಿಧ ಗ್ರಾಮಗಳ ಕೋಮಾರಪಂಥ ಸಮಾಜದ
ಹಕ್ಕುದಾರರ ಮನೆ, ಗುರುಮನೆ, ಮೇತ್ರಿ ಮನೆ ಮೊದಲಾದ ಭಾಗಗಳಲ್ಲಿ ಸುಗ್ಗಿ ತಂಡದ ಕುಣಿತ ಮತ್ತು ಗೌರವ ಸ್ವೀಕಾರ ಕಾರ್ಯಕ್ರಮ ನಡೆಯಲಿದ್ದು
ಫೆಬ್ರವರಿ 4 ರಂದು ಸಂಜೆ 6 ಘಂಟೆಗೆ ಅಂಕೋಲಾ ಜೈಹಿಂದ್ ಹೈಸ್ಕೂಲ್ ಮೈದಾನದಲ್ಲಿ ಸೇರಿ ಪಟ್ಟಣದಿಂದ ಹೊನ್ನಿಕೇರಿ ವರೆಗೆ ವಿಶೇಷ ಕುಣಿತ ಮೆರವಣಿಗೆ ನಡೆಯಲಿದೆ.
ಫೆಬ್ರವರಿ 5 ರಿಂದ ಹೋಳಿ ಹಬ್ಬದ ವರೆಗೆ ಬೊಬ್ರವಾಡ, ಶೇಡಿಕುಳಿ, ಹೊನ್ನಗುಡಿ, ನದಿಭಾಗ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ
ಸುಗ್ಗಿ ಕುಣಿತ ನಡೆಯಲಿದೆ
ತಾಲೂಕಿನ ಕೋಮಾರಪಂಥ ಸಮಾಜ ಭಾಂದವರು ಮತ್ತು ಸಾರ್ವಜನಿಕರು ಸಹಕರಿಸುವಂತೆ ಕರಿದೇವ ಉತ್ಸವ ಸಮಿತಿಯ ಸದಸ್ಯರು ಮತ್ತು ನಾಲ್ಕು ಗ್ರಾಮಗಳ ಸುಗ್ಗಿ ತಂಡದ ಪ್ರಮುಖರು ಮನವಿ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!