Wednesday, August 10, 2022

Latest Posts

ಆತಂಕದಲ್ಲಿ ಬೀದರ್ ಜನತೆ: 55 ಶಿಕ್ಷಕರು ಕೊರೋನಾಗೆ ಬಲಿ, 16 ಪೊಲೀಸರಲ್ಲಿ ಪಾಸಿಟಿವ್

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸ ದಿಗಂತ ವರದಿ, ಬೀದರ್:

ದೇಶಾದ್ಯಂತ ಕೊರೋನಾ ಮಹಾಮಾರಿಯಿಂದ ಜನರು ತತ್ತರಿಸಿದ್ದು, ಜಿಲ್ಲೆಯ ಸರಕಾರಿ ನೌಕರರೂ ಸಹ ಈ ಮಹಾಮಾರಿಯಿಂದ ಜೀವ ಕಳೆದುಕೊಂಡಿದ್ದಾರೆ.
ಕೊರೋನಾದಿಂದಾಗಿ ಜಿಲ್ಲೆಯಲ್ಲಿ ಇಲ್ಲಿಯವರೆಗೆ 48 ಶಾಲಾ ಶಿಕ್ಷಕರು ಹಾಗೂ 7 ಜನ ಕಾಲೇಜು ಪ್ರಾಧ್ಯಾಪಕರು ಜೀವ ಕಳೆದುಕೊಂಡಿದ್ದಾರೆ, ಅನಲಾಕ್ ಆದ ನಂತರ ಏಪ್ರಿಲ್ 30 ರವರಗೆ ಶಾಲಾ ಕಾಲೇಜುಗಳು ಎಂದಿನಂತೆ ಪಾಠೊಪ ಚಟುವಟಿಕೆ ನಡೆಯುತ್ತಿತ್ತು ಸಂಚಾರದಿಂದಾಗಿ ಶಿಕ್ಷಕರಲ್ಲಿ ಕೊರೋನಾ ಪಾಸಿಟಿವ್ ಕಂಡುಬಂತು ಇದರಿಂದಾಗಿ ಜೀವವೇ ಕಳೆದುಕೊಳ್ಳಬೇಕಾಯಿತು.
ಇದಲ್ಲದೇ ಜನರ ರಕ್ಷಣೆಗಾಗಿ ಹಗಲಿರುಳು ರಸ್ತೆಗಳ ಮೇಲೆ ಸೇವೆ ಸಲ್ಲಿಸುತ್ತಿರುವ 16 ಜನ ಪೊಲೀಸರಲ್ಲಿ ಕೊರೋನಾ ಪಾಸಿಟಿವ್ ಇರುವುದು ದೃಢಪಟ್ಟಿದೆ. ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಜಿಲ್ಲಾ ಆಡಳಿತ ಅನೇಕ ಕ್ರಮಗಳನ್ನು ಕೈಗೊಂಡಿದೆ, ಸಾರ್ವಜನಿಕರು ಜವಾಬ್ದಾರಿ ಅರಿತು ವರ್ತಿಸಬೇಕಿದೆ ಅನವಶ್ಯಕವಾಗಿ ರಸ್ತೆಯಲ್ಲಿ ಸಂಚರಿಸುವುದು ತಪ್ಪಿಸಬೇಕಿದೆ ಹಾಗೂ ಈಗಿರುವ ಪರಿಸ್ಥಿತಿ ಗಮನಿಸಿದರೆ ಜೂನ್ ತಿಂಗಳಲ್ಲಿ ಆರಂಭವಾಗಲಿರುವ ಶಾಲಾ ಕಾಲೇಜುಗಳ ಪುನರಾರಂಭವನ್ನು ಮುಂದೂಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss