ಅರಬೈಲ್ ಘಟ್ಟದಲ್ಲಿ ಕಾರು ಸಮೇತ ಕೋಟ್ಯಾಂತರ ರೂ. ಹಣ ದರೋಡೆ

ಹೊಸದಿಗಂತ ವರದಿ, ಯಲ್ಲಾಪುರ:

ತಾಲೂಕಿನ ಅರಬೈಲ್ ಘಟ್ಟದಲ್ಲಿ ಸ್ವಿಫ್ಟ್ ಕಾರು ಸಮೇತ ಕಾರಿನಲ್ಲಿದ್ದ ಕೋಟ್ಯಾಂತರ ರೂ ಹಣವನ್ನು ದರೋಡೆ ಮಾಡಿದ ಘಟನೆ ನಡೆದಿದೆ. ಈ ಕುರಿತು ಕೊಲ್ಲಾಪುರದ ನೀಲೇಶ ನಾಯ್ಕ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಎರಡು ಕಾರುಗಳಲ್ಲಿ ಬಂದ ಏಳೆಂಟು ಜನ ರಿದ್ದ ಗುಂಪು, ತಮಗೆ ಹೊಡೆದು, ಬೆದರಿಸಿ ತಮ್ಮ 2 ಲಕ್ಷ ರೂ ಬೆಲೆಬಾಳುವ ಸ್ವಿಫ್ಟ್ ವಿ.ಡಿ.ಐ. ಕಾರು ಸಮೇತ ಕಾರಿನಲ್ಲಿದ್ದ 2,11,86,000 ರೂ ಹಣವನ್ನು ಮತ್ತು 10 ಸಾವಿರ ರೂ ಬೆಲೆಯ ಎರಡು ಮೊಬೈಲ್ ಗಳನ್ನು ದರೋಡೆ ಮಾಡಿಕೊಂಡು ಹೋಗಿರುವುದಾಗಿ ದೂರು ನೀಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!