Thursday, August 11, 2022

Latest Posts

ಬೆಂಗಳೂರಿನಲ್ಲಿ ಭೀಕರ ಅಗ್ನಿ ಅವಘಡ: ಇಬ್ಬರು ಸಜೀವ ದಹನ, ಹಲವರಿಗೆ ಗಾಯ

ಹೊಸ ದಿಗಂತ ಆನ್ ಲೈನ್ ಡೆಸ್ಕ್

ಬೆಂಗಳೂರು ದೇವರಚಿಕ್ಕನಹಳ್ಳಿಯ ಅಶ್ರೀತ ಅಪಾರ್ಮೆಂಟ್ ನಲ್ಲಿ ಸಿಲಿಂಡರ್ ಸ್ಪೋಟಗೊಂಡು ಇಬ್ಬರು ಸಜೀವ ದಹನವಾಗಿದ್ದಾರೆ.
ತಾಯಿ ಲಕ್ಷ್ಮೀದೇವಿ (82), ಪುತ್ರಿ ಭಾಗ್ಯ ರೇಖಾ (59) ಮೃತ ದುರ್ದೈವಿಗಳು.
ಅಪಾರ್ಟ್ ಮೆಂಟ್ ನ ಒಂದು ಫ್ಲ್ಯಾಟ್ ಧಗ ಧಗನೆ ಹೊತ್ತಿ ಉರಿದಿದ್ದು, ಬೆಂಕಿಯ ತೀವ್ರತೆ 3 ಫ್ಲ್ಯಾಟ್ ಗಳಿಗೆ ಆವರಿಸಿದೆ. ಬೆಂಕಿಯ ಕೆನ್ನಾಲಿಗೆಗೆ ಹಲವರಿಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ. ಫ್ಲ್ಯಾಟ್ ನಲ್ಲಿ ಸಿಲುಕಿರೋರನ್ನು ರಕ್ಷಿಸೋದಕ್ಕೆ ಪೋಲಿಸರು, ಅಗ್ನಿಶಾಮಕ ಸಿಬ್ಬಂದಿಗಳು ಹರಸಾಹಸ ಪಟ್ಟಿದ್ದಾರೆ.
ಅಪಾರ್ಟ್​ಮೆಂಟ್​ನಲ್ಲಿ ಅಗ್ನಿ ಅವಘಡ ಸಂಭವಿಸಿರುವುದರಿಂದ ನಿವಾಸಿಗಳಿಗೆ ಸಮೀಪದ ಅಪಾರ್ಟ್​ಮೆಂಟ್​ನಲ್ಲಿ ಆಶ್ರಯ ಒದಗಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss