Monday, July 4, 2022

Latest Posts

ಕೇರಳದ ಬೆನ್ನೆಲ್ಲೇ ಉತ್ತರಾಖಂಡ್ ನಲ್ಲಿ ಭಾರೀ ಮಳೆಯ ಮುನ್ಸೂಚನೆ: 13 ಜಿಲ್ಲೆಗಳಲ್ಲಿ ರೆಡ್​ ಅಲರ್ಟ್​ ಘೋಷಣೆ

ಹೊಸದಿಗಂತ ಆನ್ ಲೈನ್ ಡೆಸ್ಕ್:

ಕೇರಳದ ಬೆನ್ನೆಲ್ಲೇ ಉತ್ತರಾಖಂಡ್ ನಲ್ಲಿ ಇಂದಿನಿಂದ ಮೂರು ದಿನ ಅಂದರೆ ಅಕ್ಟೋಬರ್​ 19ರವರೆಗೆ ವಿಪರೀತ ಮಳೆಯಾಗುವ ಮುನ್ಸೂಚನೆ ನೀಡಿರುವ ಭಾರತೀಯ ಹವಾಮಾನ ಇಲಾಖೆ (IMD) ಒಟ್ಟು 13 ಜಿಲ್ಲೆಗಳಲ್ಲಿ ರೆಡ್​ ಅಲರ್ಟ್​ ಘೋಷಣೆ ಮಾಡಿದೆ.
ರೆಡ್​ ಅಲರ್ಟ್​ ಘೋಷಣೆಯಾಗಿದ್ದರಿಂದಬದರಿನಾಥ ಯಾತ್ರೆಯೂ ಸದ್ಯದ ಮಟ್ಟಿಗೆ ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿದೆ. ಯಾತ್ರಾರ್ಥಿಗಳನ್ನು ಪಾಂಡುಕೇಶ್ವರದಲ್ಲಿಯೇ ನಿಲ್ಲಿಸಲಾಗಿದೆ. ಬದರಿನಾಥಕ್ಕೆ ಬರುತ್ತಿದ್ದ ಹಲವು ಯಾತ್ರಾರ್ಥಿಗಳನ್ನು ಅವರಿದ್ದಲ್ಲೇ ತಡೆಯಲಾಗಿದೆ. ಹಾಗೇ, ಅವರ ಸುರಕ್ಷತೆಯ ಬಗ್ಗೆಯೂ ಗಮನಹರಿಸಲಾಗಿದೆ ಎಂದು ಚಮೋಲಿ ಜಿಲ್ಲಾಧಿಕಾರಿ ಹಿಮಾಂಶು ಖುರಾನಾ ತಿಳಿಸಿದ್ದಾರೆ.
ಇನ್ನು ಸೋಮವಾರ ಚಮೋಲಿಯಲ್ಲಿ ಎಲ್ಲ ಶಾಲೆ, ಕಾಲೇಜುಗಳಿಗೂ ರಜೆ ಘೋಷಣೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಇಡೀ ಉತ್ತರಾಖಂಡ್​​ನ ಒಟ್ಟು 13 ಜಿಲ್ಲೆಗಳಿಗೆ ರೆಡ್​ ಅಲರ್ಟ್​ ಘೋಷಣೆಯಾಗಿದ್ದು, ಜನರು ಎಚ್ಚರಿಕೆಯಿಂದ ಇರಬೇಕು. ಇನ್ನೆರಡು ದಿನ ಎಲ್ಲಿಯೂ ಪ್ರಯಾಣ ಮಾಡಬೇಡಿ. ಆದಷ್ಟು ಮನೆಯಲ್ಲೇ ಸುರಕ್ಷಿತವಾಗಿರಿ ಎಂದು ಹವಾಮಾನ ಇಲಾಖೆ ನಿರ್ದೇಶಕ ವಿಕ್ರಮ್​ ಸಿಂಗ್​ ಸಲಹೆ ನೀಡಿದ್ದಾರೆ. ಸುಮಾರು 80 ಕಿಮೀ ವೇಗದಲ್ಲಿ ಬಲವಾದ ಗಾಳಿಯೂ ಬೀಸಬಹುದು ಎಂದು ಐಎಂಡಿ ಮಾಹಿತಿ ನೀಡಿದೆ.
ಇನ್ನು ಹವಾಮಾನ ಇಲಾಖೆ ಮುನ್ಸೂಚನೆ ಮೇರೆಗೆ ಉತ್ತರಾಖಂಡ್​ ಮುಖ್ಯಮಂತ್ರಿ ಪುಷ್ಕರ್​ ಸಿಂಗ್​ ಧಮಿ ಈಗಾಗಲೇ ಪೊಲೀಸರು, ರಾಜ್ಯ ವಿಪತ್ರು ಪ್ರತಿಕ್ರಿಯಾ ಪಡೆಗಳು, ಎಲ್ಲ ಜಿಲ್ಲಾಧಿಕಾರಿಗಳಿಗೂ ಅಲರ್ಟ್​ ಆಗಿರುವಂತೆ ಸೂಚಿಸಿದ್ದಾರೆ.ರಾಜ್ಯಾದ್ಯಂತ ಸುಮಾರು 29 ಎಸ್​ಡಿಆರ್​ಎಫ್​ ತಂಡಗಳು ಸಜ್ಜಾಗಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss