ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………
ಹೊಸದಿಗಂತ ವರದಿ, ಚಿಕ್ಕಮಗಳೂರು:
ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾನುವಾರ ಒಟ್ಟು 45 ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, 75 ಮಂದಿ ಗುಣಮುಖರಾಗಿದ್ದಾರೆ. ಒಬ್ಬರು ಮೃತಪಟ್ಟಿದ್ದಾರೆ.
ಚಿಕ್ಕಮಗಳೂರು ತಾಲ್ಲೂಕಿನಲ್ಲಿ 9, ಕಡೂರು ತಾಲ್ಲೂಕಿನಲ್ಲಿ 8, ತರೀಕೆರೆ 11, ಮೂಡಿಗೆರೆ 3, ಎನ್ಆರ್ಪುರ 8, ಕೊಪ್ಪ ತಾಲ್ಲೂಕಿನಲ್ಲಿ 6 ಪ್ರಕರಣ ಪತ್ತೆಯಾಗಿದೆ.
ಈ ವರೆಗೆ ಜಿಲ್ಲೆಯಲ್ಲಿ 46799 ಮಂದಿಗೆ ಸೋಂಕು ತಗುಲಿದ್ದು, 44677 ಮಂದಿ ಗುಣಮುಖರಾಗಿದ್ದಾರೆ. 1688 ಸಕ್ರೀಯ ಪ್ರಕರಣಗಳಿವೆ. ಈ ವರೆಗೆ ಒಟ್ಟು 359 ಮಂದಿ ಮೃತಪಟ್ಟಿದ್ದಾರೆ.