ವಿಮಾನದಲ್ಲಿ ಮತ್ತೆ ದುರ್ವರ್ತನೆ: ವಾಂತಿ ಮಾಡಿ, ಶೌಚಾಲಯದ ಸುತ್ತಲೂ ಮಲ ವಿಸರ್ಜಿಸಿದ ಪ್ರಯಾಣಿಕ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಮಾನದಲ್ಲಿ ಪ್ರಯಾಣಿಕರ ದುರ್ವರ್ತನೆ ಸಂಬಂಧ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ.

ಗುವಾಹಟಿಯಿಂದ ದೆಹಲಿಗೆ ಇಂಡಿಗೋ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಕುಡಿದ ಪ್ರಯಾಣಿಕನೊಬ್ಬ ವಾಂತಿ ಮಾಡಿದ್ದಾನೆ.ಇಷ್ಟೇ ಅಲ್ಲದೇ ವಿಮಾನದ ಶೌಚಾಲಯದ ಸುತ್ತಲೂ ಮಲ ವಿಸರ್ಜನೆ ಮಾಡಿದ್ದಾನೆ.

ಮಾರ್ಚ್ 26 ರಂದು ಇಂಡಿಗೋ ಫ್ಲೈಟ್ 6E 762 ನಲ್ಲಿ ಪ್ರಯಾಣಿಕನ ಇಂತಹ ಅಸಭ್ಯ ವರ್ತನೆಯ ನಂತರ ವಿಮಾನದಲ್ಲಿದ್ದ ಗಗನಸಖಿಯರು ಅದನ್ನು ಸ್ವಚ್ಛಗೊಳಿಸಬೇಕಾಯಿತು.

ಈ ಘಟನೆಯನ್ನು ವಿಮಾನದಲ್ಲಿದ್ದ ಸಹ ಪ್ರಯಾಣಿಕರೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಹೈಲೈಟ್ ಮಾಡಿದ್ದಾರೆ. ಪರಿಸ್ಥಿತಿಯನ್ನು ನಿಭಾಯಿಸಿದ್ದಕ್ಕಾಗಿ ವಿಮಾನ ಸಿಬ್ಬಂದಿಯನ್ನು ಶ್ಲಾಘಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!