Tuesday, June 28, 2022

Latest Posts

ಗುಜರಾತ್ ನಲ್ಲಿ ಭಾರೀ ಮಳೆ: ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………….

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಗುಜರಾತ್​ನ​ ಅನೇಕ ಪ್ರದೇಶಗಳಲ್ಲಿ ವಿಪರೀತ ಮಳೆಯಾಗುತ್ತಿದ್ದು, ಸದ್ಯ 56 ರಸ್ತೆಗಳು ಬ್ಲಾಕ್​ ಆಗಿವೆ ಎಂದು ಗುಜರಾತ್​ ಸರ್ಕಾರ ತಿಳಿಸಿದೆ. ಇನ್ನು ನಾಳೆಯವರೆಗೂ ಇದೇ ಪ್ರಮಾಣದ ಮಳೆ ಬೀಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದ್ದು, ಜು.29ರವರೆಗೂ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಸೂಚಿಸಲಾಗಿದೆ.
ಇಂದು ಮುಂಜಾನೆ 6ಗಂಟೆಗೆ ಕೊನೆಯಾಗುವಂತೆ 24 ಗಂಟೆಯಲ್ಲಿ ಸೌರಾಷ್ಟ್ರ ಸೇರಿ ಗುಜರಾತ್​​ನ ಅನೇಕ ಕಡೆಗಳಲ್ಲಿ ವಿಪರೀತ ಮಳೆಯಾಗಿದೆ ಎಂದು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ (SEOC) ತಿಳಿಸಿದೆ.
ಸೌರಾಷ್ಟ್ರದ ರಾಜಕೋಟಾ ಜಿಲ್ಲೆಯ ಲೊಧಿಕಾ ತಾಲೂಕಿನಲ್ಲಿ 24 ಗಂಟೆಯಲ್ಲಿ ಅತಿಹೆಚ್ಚು ಅಂದರೆ 198 ಮಿಮೀ ಮಳೆಯಾಗಿದೆ. ಹಾಗೇ, ಛೋಟೌಡ್​ಪುರ್​​ನಲ್ಲಿ 190 ಎಂಎಂ, ಕ್ವಾಂತ್​ನಲ್ಲಿ 182 ಮಿಮೀ ಮಳೆಬಿದ್ದಿದೆ. ಇದರ ಹೊರಾತಿಗೆ ಮಹೀದಾಗರ್​, ಖೇದಾ, ವಡೋದರಾ, ಪಂಚಮಹಲ್​, ಅರ್ವಲ್ಲಿ, ಮೊರ್ಬಿ ಸೇರಿ ಹಲವೆಡೆ 100 ಮಿಮೀ ಗೂ ಅಧಿಕ ಪ್ರಮಾಣದಲ್ಲಿ ಮಳೆಯಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss