ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Wednesday, June 16, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ದಿ.ಸಿ.ಎಂ.ಉದಾಸಿ ಶಿಸ್ತುಬದ್ಧ ರಾಜಕಾರಣಿ: ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸ ದಿಗಂತ ವರದಿ, ಹಾವೇರಿ:

ದಿ. ಸಿ.ಎಂ.ಉದಾಸಿ ಒಬ್ಬ ಶಿಸ್ತುಬದ್ಧ ರಾಜಕಾರಣಿ. ಅವರು ಸಚಿವರಾಗಿ ಹಾಗೂ ಶಾಸಕರಾಗಿ ಹಾನಗಲ್ ಕ್ಷೇತ್ರದ ಅಭಿವೃದ್ಧಿ ಜೊತೆಗೆ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಕೆಲಸಮಾಡುವ ಮೂಲಕ ಅವರ ಹೆಜ್ಜೆಗುರುತು ಬಿಟ್ಟುಹೋಗಿದ್ದಾರೆ ಎಂದು ಉಪ ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ ಅವರು ಹೇಳಿದರು.
ಗುರುವಾರ ಹಾನಗಲ್ ಪಟ್ಟಣದ ದಿ. ಸಿ.ಎಂ.ಉದಾಸಿ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ ಅವರು , ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ನನ್ನ ಹಾಗೂ ಉದಾಸಿ ಅವರ ಸಂಬಂಧ 37 ವರ್ಷದ್ದಾಗಿದೆ. ಉದಾಸಿ ಅವರು ನನ್ನ ಮಾರ್ಗದರ್ಶಕರು ಹಾಗೂ ಹಿರಿಯಣ್ಣನಾಗಿದ್ದರು. ತಮ್ಮ ಅನುಭವದ ಮೂಲಕ ತಿಳುವಳಿಕೆ ನೀಡುತ್ತಿದ್ದರು ಎಂದರು.
ಉದಾಸಿ ಅವರು ತಮ್ಮ ಜೀವನದಲ್ಲಿ ಹಾಕಿಕೊಂಡ ಕೆಲಸಗಳನ್ನು ಕುಟುಂಬ ವರ್ಗದವರು, ಸ್ನೇಹಿತರು ಮಾಡಿದಾಗ ನಿಜವಾದ ಶ್ರದ್ಧಾಂಜಲಿ ಸಲ್ಲಿಸಿದಂತೆ. ಭಗವಂತನು ಮೃತರ ಆತ್ಮಕೆ ಚಿರಶಾಂತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದರು.
ಲಾಕ್‌ಡೌನ್
ಲಾಕ್‌ಡೌನ್ ಕುರಿತು ಮುಖ್ಯಮಂತ್ರಿಗಳು ಇಂದು ಸಂಜೆ ಮಾರ್ಗಸೂಚಿ ಪ್ರಕಟಿಸಲಿದ್ದಾರೆ. ಪಾಸಿಟಿವ್ ರೇಟ್ ಹೆಚ್ಚಿರುವ ಜಿಲ್ಲೆಗಳಲ್ಲಿ ಲಾಕ್‌ಡೌನ್ ವಿಸ್ತರಿಸಲು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗಿದೆ. ಈ ಮಧ್ಯೆ ಕಟ್ಟಡ ಹಾಗೂ ಅಲೋಮೊಬೈಲ್ ಚಟುವಟಿಕೆಗಳಿಗೆ ವಿನಾಯಿತಿ ನೀಡಲು ಚಿಂತನೆ ಮಾಡಲಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸಂಸದ ಶಿವಕುಮಾರ ಉದಾಸಿ ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss