Tuesday, June 28, 2022

Latest Posts

ಭಾರತದಲ್ಲಿರುವ ತನ್ನ ಪ್ರಜೆಗಳಿಗೆ ವಾಪಸ್ಸಾಗುವಂತೆ ಅಮೆರಿಕ ಕರೆ!

ಹೊಸದಿಗಂತ ಆನ್ ಲೈನ್ ಡೆಸ್ಕ್:

ಭಾರತದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಏರುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿ ವಾಸಿಸುತ್ತಿರುವ ತನ್ನ ದೇಶದ ಪ್ರಜೆಗಳಿಗೆ ಅಮೆರಿಕಾ ಕೂಡಲೇ ವಾಪಸ್ಸಾಗುವಂತೆ ಹೇಳಿದೆ. ಅಮೇರಿಕಾದ ವಿದೇಶಾಂಗ ವ್ಯವಹಾರಗಳಿಗೆ ಸಂಬಂಧಿಸಿದ ಇಲಾಖೆಯು ತಾನು ಇದುವರೆಗೆ ಜಾರಿ ಮಾಡಿರದ 4ನೇ ಹಂತದ ಸಲಹೆಯನ್ನು ಬಿಡುಗಡೆ ಮಾಡಿ ಅಮೆರಿಕನ್ನರಿಗೆ ಭಾರತಕ್ಕೆ ಪ್ರಯಾಣಿಸದಂತೆ ಮತ್ತು ಆದಷ್ಟು ಬೇಗ ಭಾರತವನ್ನು ಬಿಡುವಂತೆ ಹೇಳಿದೆ. ಭಾರತದಿಂದ ಅಮೆರಿಕಾಗೆ 14 ನೇರ ವಿಮಾನಗಳಿವೆ ಮತ್ತು ಯೂರೋಪಿಗೆ ಕನೆಕ್ಟ್​ ಆಗುವ ಸಾಕಷ್ಟು ಫ್ಲೈಟ್​ಗಳಿವೆ ಅಂತಲೂ ಅದು ಹೇಳಿದೆ.
ಭಾರತದಲ್ಲಿ ಕೊವಿಡ್​ ಸ್ಥಿತಿ ಅಪಾಯಕಾರಿ ಹಂತ ತಲುಪಿದ್ದು, ಸ್ಥಳ ಹಾಗೂ ಬೆಡ್​ಗಳ ಅಭಾವದಿಂದಾಗಿ ಅಮೆರಿಕನ್ನರಿಗೆ ಭಾರತದ ಆಸ್ಪತ್ರೆಗಳಲ್ಲಿ ದಾಖಲಾತಿ ಸಿಗುತ್ತಿಲ್ಲ ಎಂದು ಅಮೆರಿಕದ ರಾಯಭಾರಿ ಕಚೇರಿಯ ವೆಬ್​ಸೈಟ್​ನಲ್ಲಿ ಹೇಳಲಾಗಿದೆ.
ಪರಿಸ್ಥಿತಿ ಹಾಗಿರುವುದರಿಂದ ಅಮೆರಿಕದ ಪ್ರಜೆಗಳು ಲಭ್ಯವಿರುವ ಯಾವುದೆ ವಾಣಿಜ್ಯ ವಿಮಾನದ ಮೂಲಕ ದೇಶಕ್ಕೆ ಹಿಂತಿರುಗುವ ಪ್ರಯತ್ನ ಮಾಡಬೇಕು ಅಂತ ಅದರಲ್ಲಿ ನಮೂದಿಸಲಾಗಿದೆ. ಚೆನ್ನೈ ನಲ್ಲಿರುವ ಅಮೆರಿಕಾದ ರಾಯಭಾರ ಕಚೇರಿಯಲ್ಲಿ ಅಮೆರಿಕನ್ ಪ್ರಜೆಗಳ ಎಲ್ಲ ರೂಟೀನ್ ಸೇವೆ ಮತ್ತು ವಿಸಾ ಸೇವೆಗಳನ್ನು ರದ್ದು ಮಾಡಲಾಗಿದೆ.
ಭಾರತವನ್ನು ಬಿಡಲಿಚ್ಛಿಸುತ್ತಿರುವ ಅಮೆರಿಕನ್ನರಿಗೆ ಯಾವುದಾದರೂ ನೆರವು ಸಿಗಲಿದೆಯೇ ಮತ್ತು ಅಮೆರಿಕಾ ತಲುಪಿದ ನಂತರ ಅವರು ಕ್ವಾರಂಟೈನ್ ಶಿಷ್ಟಾಚಾರಗಳಿಗೆ ಒಳಗಾಗಬೇಕೇ ಎಂದ ಕೇಳಲಾದ ಪ್ರಶ್ನೆಗೆ ದೆಹಲಿಯಲ್ಲಿರುವ ಯುಎಸ್ ರಾಯಬಾರಿ ಕಚೇರಿಯ ಪ್ರತಿನಿಧಿ ಪ್ರತಿಕ್ರಿಯೆ ನೀಡಲಿಲ್ಲ.
ಬ್ರಿಟನ್ ಸಹ ಭಾರತದ ವಿಮಾನಗಳಿಗೆ ನಿರ್ಬಂಧ ಹೇರಿದೆ. ಹಾಗೆಯೇ, ಯುಎಇ, ಕುವೈತ್, ಭಾರತದ ನಾಗರಿಕ ವಿಮಾನಗಳನ್ನು ನಿಷೇಧಿಸಿವೆ. ಕಳೆದ ವಾರ ಕೆನಡಾ, ಭಾರತ ಮತ್ತು ಪಾಕಿಸ್ತಾನದಿಂದ ಬರುವ ವಿಮಾನಗಳನ್ನು ತಡೆದಿದೆ. ಈ ವಾರ ಆಸ್ಟ್ರೇಲಿಯಾ ಸಹ ಬಾರತದ ವಿಮಾನಗಳು ತನ್ನ ಗಡಿ ಪ್ರವೇಶಿಸಬಾರದೆಂದು ಹೇಳಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss