Thursday, August 11, 2022

Latest Posts

ಜೇವರ್ಗಿಯಲ್ಲಿ ಆಮ್ಲಜನಕ ಸಹಿತ 16 ಹಾಸಿಗೆ ಕೋವಿಡ್ ಕೇರ್ ಸೆಂಟರ್ ಗೆ ಚಾಲನೆ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸ ದಿಗಂತ ವರದಿ, ಕಲಬುರಗಿ:

ಕೊರೋನಾ 2 ನೇ ಅಲೆಯಿಂದ ಕಂಗೆಟ್ಟಿರುವ ಜೇವರ್ಗಿ ಜನತೆಯ ನೆರವಿಗೆ ಧಾವಿಸಿರುವ ಧರಂಸಿಂಗ್ ಫೌಂಡೇಷನ್ ಶುಕ್ರವಾರ ಜೇವರ್ಗಿ ತಾಲೂಕಾ ಆಸ್ಪತ್ರೆಯಲ್ಲಿ ಆಕ್ಸೀಜನ್ ಸಹಿತ 16 ಹಾಸಿಗೆಗಳ ಉಚಿತ ಚಿಕಿತ್ಸೆಯ ಕೋವಿಡ್ ಕೇರ್ ಸೆಂಟರ್ ಆರಂಭಿಸಿದೆ.
ಜಿಲ್ಲಾಡಳಿತದ ಸಹಯೋಗದಲ್ಲಿ ತಾಲೂಕು ಆಸ್ಪತ್ರೆ ಅಂಗಳದಲ್ಲಿ ಸ್ಥಾಪಿಸಲಾಗಿರುವ ಕೋವಿಡ್ ಕೇರ್  ಸೆಂಟರ್ ಜೇವರ್ಗಿ ಶಾಸಕರಾದ ಡಾ. ಅಜಯ್ ಸಿಂಗ್ ಚಾಲನೆ ನೀಡಿದ್ದಾರೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶರಣಬಸಪ್ಪ ಗಣಜಲಖೇಡ್, ತಾಲೂಕಾ ಆರೋಗ್ಯಾಧಿಕಾರಿ ಡಾ. ಸಿದ್ದು ಜೇರಟಗಿ, ತಹಶೀಲ್ದಾರ್ ವಿನೋದ ಪಾಟೀಲ್ ಈ ಸಂದರ್ಭದಲ್ಲಿ ಹಾಜರಿದ್ದರು.
ಈಗಾಗಲೇ ಈ ಕೊರೋನಾ ಕಾಳಜಿ ಕೇಂದ್ರದಲ್ಲಿ ಮೊದಲ ದಿನವೇ 13 ಸೋಂಕಿತರು ಚಿಕಿತ್ಸೆಗೆ ದಾಖಲಾಗದ್ದಾರೆ. ಇವರೆಲ್ಲರಿಗೂ ಆಕ್ಸೀಜನ್ ಸವಲತ್ತಿರುವ ಚಿಕಿತ್ಸೆ ನೀಡಲಾಗುತ್ತಿದೆ. ಇದಲ್ಲದೆ ಈ ಕೇಂದ್ರದಲ್ಲಿ 2 ವೆಂಟಿಲೇಟರ್‍ಗಳನ್ನೂ ಅಳವಡಿಸಲಾಗಿದ್ದು ಸೋಂಕಿನ ತೀವ್ರತೆ ಅಧಿಕಗೊಂಡಲ್ಲಿ ಅಂತಹರಿಗೆ ಜೀವ ರಕ್ಷಕ ಸಾಧನೆಯ ಚಿಕಿತ್ಸೆಯ ಸವಲತ್ತನ್ನೂ ಇಲ್ಲಿ ಸಿದ್ಧವಾಗಿಡಲಾಗಿದೆ.
ಜಿಲ್ಲೆಯ ಸೇಡಂನಲ್ಲಿ 20, ಅಫಜಲ್ಪುರ, ಆಳಂದ ಹಾಗೂ ಚಿತ್ತಾಪುರದಲ್ಲಿ ತಲಾ 10 ಸಿಲಿಂಡರ್ ಸವಲತ್ತಿನ ಕೋವಿಡ್ ಕೇರ್ ಸೆಂಟರ್ ಸರಕಾರಿ ಹಂತದಲ್ಲಿ ಆರಂಭವಾಗಿವೆ, ಆದರೆ ಜೇವರ್ಗಿಯಲ್ಲಿ ಏಕಕಾಲಕ್ಕೇ 48 ಆಕ್ಸೀಜನ್ ಸಿಲಿಂಡರ್ ಬೆಂಬಲವಿರುವ 16 ಹಾಸಿಗೆಗಳ ಕಾಳಜಿ ಕೇಂದ್ರ ಆರಂಭವಾಗುತ್ತಿದೆ. ಆದರೆ ಜೇವರ್ಗಿಯಲ್ಲಿ ಸರಕಾರಿ ಸಹಯೋಗದಲ್ಲಿ ಧರಂಸಿಂಗ್ ಫೌಂಡೇಷನ್ ಸೋಂಕಿತರ ನೆರವಿಗೆ ನಿಂತಿರೋದು ವಿಶೇಷವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss