Sunday, July 3, 2022

Latest Posts

ಕಲಬುರಗಿ ಜಿಲ್ಲೆಯಲ್ಲಿ 276 ಮಂದಿಗೆ ಕೊರೋನಾ ಪಾಸಿಟಿವ್

ಹೊಸ ದಿಗಂತ ವರದಿ, ಕಲಬುರಗಿ:

ಕೊರೋನಾ ಸೋಂಕಿನಿಂದ ಕಲಬುರಗಿ ಜಿಲ್ಲೆಯಲ್ಲಿ ಇಬ್ಬರು ನಿಧನರಾಗಿದ್ದು, 276 ಪಾಸಿಟಿವ್ ವರದಿಗಳು ದೃಢವಾಗಿವೆ ಎಂದು ಶನಿವಾರದ ಅರೋಗ್ಯ ಬುಲೆಟಿನ್ ತಿಳಿಸಿದೆ.
ತೀವ್ರ ಉಸಿರಾಟ ತೊಂದರೆ ಹಿನ್ನೆಲೆ ಜೊತೆಗೆ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಕಲಬುರಗಿ‌ ನಗರದ
ಆಳಂದ ಕಾಲೋನಿಯ 82 ವರ್ಷದ ವೃದ್ಧ ಏ.5 ರಂದು ಕೋವಿಡ್ ಅಸ್ಪತ್ರೆಗೆ ದಾಖಲಾಗಿ, ಏ.9 ರಂದು ನಿಧನ ಹೊಂದಿದ್ದಾರೆ.
ಅಲ್ಲದೆ‌ ಐ.ಎಲ್.ಐ. ಹಿನ್ನೆಲೆಯಿಂದ ಅಫಜಲಪೂರ ತಾಲೂಕಿನ ಉಡಚಣ‌ ಗ್ರಾಮದ 57 ವರ್ಷದ ಮಹಿಳೆ ಏ.5 ರಂದು
ತಮ್ಮ‌ಮನೆಯಲ್ಲಿಯೆ ನಿಧನ ಹೊಂದಿದ್ದಾರೆ.
ಇದರಿಂದ ಜಿಲ್ಲೆಯಲ್ಲಿ ಇದುವರೆಗೂ ಕೊರೋನಾ ಸೋಂಕಿನಿಂದ 362 ಜನ ನಿಧನರಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss