Wednesday, August 10, 2022

Latest Posts

ಕಾಸರಗೋಡು ಜಿಲ್ಲೆಯಲ್ಲಿ ಇಂದು 246 ಜನರಿಗೆ ಕೊರೋನಾ ಪಾಸಿಟಿವ್, 335 ಮಂದಿ ಗುಣಮುಖ

ಹೊಸ ದಿಗಂತ ವರದಿ, ಕಾಸರಗೋಡು:

ಜಿಲ್ಲೆಯಲ್ಲಿ ಶುಕ್ರವಾರ 246 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. ಈ ಪೈಕಿ 238 ಜನರಿಗೆ ಸಂಪರ್ಕದ ಮೂಲಕ ವೈರಸ್ ತಗಲಿದೆ. ಅಲ್ಲದೆ ಜಿಲ್ಲೆಯಲ್ಲಿ 335 ಮಂದಿ ಸೋಂಕುಮುಕ್ತರಾದರು. ಈ ಮಧ್ಯೆ ಜಿಲ್ಲೆಯಲ್ಲಿ ಕೊರೋನಾ ಬಾಧಿಸಿ ಶುಕ್ರವಾರ ಒಂದು ಸಾವು ಸಂಭವಿಸಿದ್ದು , ಅದರಂತೆ ಒಟ್ಟು 518 ಜನರು ಸಾವನ್ನಪ್ಪಿದರು. ಕೇರಳದಲ್ಲಿ ಹೊಸದಾಗಿ 17,983 ಜನರಿಗೆ ಕೋವಿಡ್ ವೈರಸ್ ದೃಢಗೊಂಡಿದೆ. ಇದರಲ್ಲಿ 16,918 ಮಂದಿಗೆ ಸಂಪರ್ಕದಿಂದ ಸೋಂಕು ತಗಲಿದೆ. ರಾಜ್ಯದಲ್ಲಿ 15,054 ಜನರು ಗುಣಮುಖರಾದರು.
ಕೇರಳದ ಜಿಲ್ಲೆಗಳ ಪೈಕಿ ತೃಶೂರು ಜಿಲ್ಲೆಯಲ್ಲಿ 2784, ಎರ್ನಾಕುಳಂ 2397, ತಿರುವನಂತಪುರ 1802, ಕೊಲ್ಲಂ 1500, ಕೋಟ್ಟಾಯಂ 1367, ಕಲ್ಲಿಕೋಟೆ 1362, ಪಾಲಕ್ಕಾಡು 1312, ಮಲಪ್ಪುರಂ 1285, ಆಲಪ್ಪುಳ 1164, ಇಡುಕ್ಕಿ 848, ಕಣ್ಣೂರು 819, ಪತ್ತನಂತ್ತಿಟ್ಟ 759, ವಯನಾಡು 338, ಕಾಸರಗೋಡು ಜಿಲ್ಲೆಯಲ್ಲಿ 246 ಜನರಿಗೆ ಕೊರೋನಾ ಪಾಸಿಟಿವ್ ಆಗಿದೆ. ಇದೇ ವೇಳೆ ಕೇರಳದಲ್ಲಿ ಶುಕ್ರವಾರ ಕೋವಿಡ್ ವೈರಸ್ ಬಾಧಿಸಿ 127 ಮಂದಿ ಮೃತಪಟ್ಟರು. ಈ ಮೂಲಕ ರಾಜ್ಯದಲ್ಲಿ ಇದುವರೆಗೆ ಒಟ್ಟು 24,118 ಜನರು ಮರಣ ಹೊಂದಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss