Wednesday, June 29, 2022

Latest Posts

ಕಾಸರಗೋಡಿನಲ್ಲಿ ಸಾವಿರ ಗಡಿ ದಾಟಿದ ಕೊರೋನಾ ಕೇಸ್: ಇಂದು ಬರೋಬ್ಬರಿ 1063 ಮಂದಿಗೆ ಪಾಸಿಟಿವ್

ಹೊಸದಿಗಂತ ವರದಿ, ಕಾಸರಗೋಡು:

ಜಿಲ್ಲೆಯಲ್ಲಿ ಗುರುವಾರ ಮತ್ತೆ ಕೋವಿಡ್ ಆರ್ಭಟಿಸಿದ್ದು , ಹೊಸದಾಗಿ 1063 ಮಂದಿಗೆ ಸೋಂಕು ದೃಢಗೊಂಡಿದೆ. ಈ ಪೈಕಿ 1025 ಜನರಿಗೆ ಸಂಪರ್ಕದ ಮೂಲಕ ವೈರಸ್ ಬಾಧಿಸಿದೆ. ಅಲ್ಲದೆ ಜಿಲ್ಲೆಯಲ್ಲಿ 699 ಮಂದಿ ಗುಣಮುಖರಾದರು. ಇದೇ ವೇಳೆ ಕೇರಳದಲ್ಲಿ ಕೊರೋನಾ ಅಟ್ಟಹಾಸ ಮೆರೆದಿದ್ದು , ಹೊಸದಾಗಿ ಬರೋಬ್ಬರಿ 38,607 ಜನರಿಗೆ ಕೋವಿಡ್ ಪರೀಕ್ಷೆ ಪಾಸಿಟಿವ್ ಆಗಿದೆ. ಇದರಲ್ಲಿ 35,577 ಮಂದಿಗೆ ಸಂಪರ್ಕದಿಂದ ಸೋಂಕು ತಗಲಿದೆ. ರಾಜ್ಯದಲ್ಲಿ 21,116 ಜನರು ಗುಣಮುಖರಾದರು.
ಎರ್ನಾಕುಳಂ ಜಿಲ್ಲೆಯಲ್ಲಿ 5369, ಕಲ್ಲಿಕೋಟೆ 4990, ತೃಶೂರು 3954, ತಿರುವನಂತಪುರ 3940, ಮಲಪ್ಪುರಂ 3857, ಕೋಟ್ಟಾಯಂ 3616, ಪಾಲಕ್ಕಾಡು 2411, ಕೊಲ್ಲಂ 2058, ಆಲಪ್ಪುಳ 2043, ಕಣ್ಣೂರು 1999, ಪತ್ತನಂತ್ತಿಟ್ಟ 1245, ಇಡುಕ್ಕಿ 1153, ಕಾಸರಗೋಡು 1063, ವಯನಾಡು ಜಿಲ್ಲೆಯಲ್ಲಿ 909 ಜನರಿಗೆ ಕೋವಿಡ್ ವೈರಸ್ ದೃಢಪಟ್ಟಿದೆ. ಈ ಮಧ್ಯೆ ಕೇರಳದಲ್ಲಿ ಕೊರೋನಾ ಬಾಧಿಸಿ ಗುರುವಾರ 48 ಮಂದಿ ಮೃತಪಟ್ಟರು. ಈ ಮೂಲಕ ರಾಜ್ಯದಲ್ಲಿ ಇದುವರೆಗೆ ಒಟ್ಟು 5259 ಜನರು ಸಾವಿಗೀಡಾದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss