spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, September 23, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕೇರಳದಲ್ಲಿ ಲಾಕ್‍ ಡೌನ್ ದೀರ್ಘಕಾಲ ಮುಂದುವರಿಸಲು ಸಾಧ್ಯವಿಲ್ಲ: ಮುಖ್ಯಮಂತ್ರಿ ಪಿಣರಾಯಿ ವಿಜಯನ್

- Advertisement -Nitte

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………

ಹೊಸ ದಿಗಂತ ವರದಿ, ಕಾಸರಗೋಡು:

ಕೇರಳದಲ್ಲಿ ಕೋವಿಡ್ ನಿರ್ಬಂಧಗಳು ಜನರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿರುವುದರಿಂದ ದೀರ್ಘಕಾಲ ಈ ರೀತಿಯಾಗಿ ಲಾಕ್ ಡೌನ್ ವ್ಯವಸ್ಥೆಯನ್ನು ಮುಂದುವರಿಯಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ. ಅಲ್ಲದೆ ನಿಯಂತ್ರಣಗಳಿಗೆ ಪರ್ಯಾಯ ಮಾರ್ಗಗಳನ್ನು ಕಂಡುಹಿಡಿಯಬೇಕು. ಮುಚ್ಚುವಿಕೆಯ ಬದಲು ಇನ್ನಿತರ ಬೇರೆ ವ್ಯವಸ್ಥೆಗಳನ್ನು ಬುಧವಾರ (ಆಗಸ್ಟ್ 4) ದೊಳಗೆ ಮಂಡಿಸಬೇಕು ಎಂದು ತಿರುವನಂತಪುರದಲ್ಲಿ ಜರಗಿದ ಉನ್ನತ ಮಟ್ಟದ ಕೊರೋನಾ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದರು.
ನಿರ್ಬಂಧಗಳು ಪರೀಕ್ಷಾ ಸಕಾರಾತ್ಮಕ ದರ (ಟಿಪಿಆರ್) ಅಥವಾ ಇತರ ವೈಜ್ಞಾನಿಕ ವಿಧಾನಗಳಿಗೆ ಅನುಗುಣವಾಗಿರಬೇಕೇ ಎಂಬ ಬಗ್ಗೆ ವಿವರವಾದ ಅಧ್ಯಯನ ನಡೆಸಿದ ನಂತರ ಬುಧವಾರ ವರದಿಯನ್ನು ಸಲ್ಲಿಸಬೇಕು. ಎಲ್ಲ ವಲಯಗಳೊಂದಿಗೆ ಚರ್ಚೆ ನಡೆಸುವಂತೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ತಜ್ಞರ ಸಮಿತಿ ಮತ್ತು ಮುಖ್ಯ ಕಾರ್ಯದರ್ಶಿಗೆ ನಿರ್ದೇಶನವಿತ್ತರು.
ಜಿಲ್ಲಾಧಿಕಾರಿಗಳಿಗೆ ಹೆಚ್ಚಿನ ಅಧಿಕಾರವನ್ನು ನೀಡುವುದು ಮತ್ತು ಕೋವಿಡ್ ಲಾಕ್ ಡೌನ್ ವ್ಯವಸ್ಥೆಯನ್ನು ಸ್ಥಳೀಯ ಮಟ್ಟದಲ್ಲಿ ನಿಯಂತ್ರಿಸುವುದು ಸರಕಾರದ ನೀತಿಯಾಗಿದೆ. ಹೊಸ ಯೋಜನೆ ಕುರಿತು ವರದಿಯನ್ನು ತಜ್ಞ ಸಮಿತಿಯ ಸದಸ್ಯರು ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳು ತಯಾರಿಸುತ್ತಾರೆ. ಇದೇ ವೇಳೆ ಕೇರಳವು ತಿಂಗಳಿಗೆ ಒಂದು ಕೋಟಿ ಜನರಿಗೆ ಕೋವಿಡ್ ವಿರುದ್ಧ ಲಸಿಕೆ ಹಾಕುವ ಸಾಮರ್ಥ್ಯವನ್ನು ಹೊಂದಿದೆ ಎಂದು ಮುಖ್ಯಮಂತ್ರಿ ಹೇಳಿದರು. ವಾರಕ್ಕೆ 25 ಲಕ್ಷ ಡೋಸ್ ಲಸಿಕೆಯೊಂದಿಗೆ ರಾಜ್ಯದಲ್ಲಿ ತಿಂಗಳಿಗೆ ಒಂದು ಕೋಟಿ ಡೋಸ್ ನೀಡಬಹುದು ಎಂದರು.
ಎರಡನೇ ಬಾರಿ ಕೇರಳದಲ್ಲಿ ಕೋವಿಡ್ ನಿರ್ಬಂಧಗಳು ಮೂರು ತಿಂಗಳು ಪೂರ್ತಿಗೊಂಡವು. ಆದರೆ ಕಠಿಣ ನಿಯಂತ್ರಣಗಳ ಹೊರತಾಗಿಯೂ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಕಡಿಮೆಯಾಗಿಲ್ಲ. ಲಾಕ್ ಡೌನ್ ಹೇರುವುದಕ್ಕೆ ಸಾರ್ವಜನಿಕರಿಂದ ಮತ್ತು ವ್ಯಾಪಾರಿಗಳಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಆದ್ದರಿಂದ ಲಾಕ್ ಡೌನ್ ಗೆ ಪರ್ಯಾಯವಾಗಿ ಬೇರೆ ವ್ಯವಸ್ಥೆಗಳಿವೆಯೇ ಎಂಬುದನ್ನು ಸರಕಾರವು ಚಿಂತಿಸುವಂತಾಗಿದೆ ಎಂದು ಮುಖ್ಯಮಂತ್ರಿ ನುಡಿದರು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss