ಹೊಸ ದಿಗಂತ ವರದಿ, ಮಡಿಕೇರಿ:
ಗುರುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಸರಾಸರಿ ಮಳೆ 9.99 ಮಿ.ಮೀ. ಮಳೆಯಾಗಿದೆ.
ಮಡಿಕೇರಿ ತಾಲೂಕಿನಲ್ಲಿ 16.10 ಮಿ.ಮೀ, ವೀರಾಜಪೇಟೆ ತಾಲೂಕಿನಲ್ಲಿ 7.70 ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ 6.17 ಮಿ.ಮೀ. ಮಳೆಯಾಗಿದ್ದು, ವರ್ಷಾರಂಭದಿಂದ ಇದುವರೆಗೆ ಜಿಲ್ಲೆಯಲ್ಲಿ ಸರಾಸರಿ 122.56 ಮಿ.ಮೀ. ಮಳೆಯಾದಂತಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಮಳೆ ಪ್ರಮಾಣ ಕೇವಲ 17.01 ಮಿ.ಮೀ.ನಷ್ಟಿತ್ತು.
ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಹೋಬಳಿವಾರು ದಾಖಲಾಗಿರುವ ಮಳೆ ವಿವರದನ್ವಯ ಮಡಿಕೇರಿ ಕಸಬಾ 37, ನಾಪೋಕ್ಲು 10, ಭಾಗಮಂಡಲ 17.40, ವೀರಾಜಪೇಟೆ ಕಸಬಾ 22, ಪೊನ್ನಂಪೇಟೆ 9.20, ಅಮ್ಮತ್ತಿ 15, ಸೋಮವಾರಪೇಟೆ ಕಸಬಾ 8.40, ಶನಿವಾರಸಂತೆ 5, ಶಾಂತಳ್ಳಿ 17, ಕೊಡ್ಲಿಪೇಟೆ 2.40, ಕುಶಾಲನಗರ 1, ಸುಂಟಿಕೊಪ್ಪ 3.20 ಮಿ.ಮೀ.ಮಳೆಯಾಗಿದೆ.
ವರ್ಷಾರಂಭದಿಂದ ಇದುವರೆಗೆ ಮಡಿಕೇರಿ ತಾಲೂಕಿನಲ್ಲಿ 133.40ಮಿ.ಮೀ.(ಕಳೆದ ವರ್ಷ ಇದೇ ಅವಧಿಯಲ್ಲಿ 19.60ಮಿ.ಮೀ.), ವೀರಾಜಪೇಟೆ ತಾಲೂಕಿನಲ್ಲಿ 122.57 (26.64) ಸೋಮವಾರಪೇಟೆ ತಾಲೂಕಿನಲ್ಲಿ 111.70 (16.48) ಮಿ.ಮೀ.ಮಳೆಯಾದಂತಾಗಿದೆ.
ಹಾರಂಗಿ ನೀರಿನ ಮಟ್ಟ: ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳಾಗಿದ್ದು, ಗುರುವಾರ ಜಲಾಶಯದ ನೀರಿನ ಮಟ್ಟ 2820.77 ಅಡಿಗಳಷ್ಟಿತ್ತು. ಜಲಾಶಯಕ್ಕೆ 68 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ನದಿಗೆ 120 ಹಾಗೂ ನಾಲೆಗೆ 70 ಕ್ಯುಸೆಕ್ ಸೇರಿದಂತೆ 190 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ.