ಹೊಸದಿಗಂತ ಆನ್ ಲೈನ್ ಡೆಸ್ಕ್:
ಮಹಾರಾಷ್ಟ್ರದಲ್ಲಿ ಇಂದು 55,411 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 33,43,951ಕ್ಕೆ ಏರಿಕೆ ಕಂಡಿದೆ.
ಇನ್ನು ಇಂದು ಸೋಂಕಿಗೆ 309 ಜನರು ಮೃತಪಟ್ಟಿದ್ದು, ಈ ಮೂಲಕ 57,638 ಸೋಂಕಿತರು ಬಲಿಯಾಗಿದ್ದಾರೆ.
ಕಳೆದ 24 ಗಂಟೆಗಳಲ್ಲಿ 53,005 ಮಂದಿ ಗುಣಮುಖರಾಗಿದ್ದು, ಒಟ್ಟು 27,48,153 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಸದ್ಯ ರಾಜ್ಯದಲ್ಲಿ 5,36,682 ಸಕ್ರಿಯ ಪ್ರಕರಣಗಳಿವೆ.