ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………
ಹೊಸದಿಗಂತ ಆನ್ ಲೈನ್ ಡೆಸ್ಕ್:
ಮುಂಬೈಯಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ಹಲವಾರು ಮರಗಳು ನೆಲಕ್ಕುರುಳಿವೆ. ರಸ್ತೆಗಳು ಹಾನಿಗೊಳಗಾಗಿವೆ. ಜೊತೆಗೆ ಮಳೆಯಿಂದ ರೈಲ್ವೆ ಹಳಿಗಳ ಮೇಲೆ ನೀರು ತುಂಬಿ ಸಂಚಾರಕ್ಕೂ ಅಡೆಚಣೆಯಾಗಿದ್ದು, ಜಾಲತಾಣಗಳಲ್ಲಿ ಮಳೆಯ ನಂತರದ ಮುಂಬೈನ ವಿಡಿಯೋವೊಂದು ಆಘಾತ ಮೂಡಿಸುವಂತಿದೆ.
ಹೌದು, ಮುಂಬೈನ ಘಾಟ್ಕೋಪರ್ ಪ್ರದೇಶದಲ್ಲಿ ಮನೆಯ ಮುಂದೆ ನಿಲ್ಲಿಸಿದ್ದ ಕಾರು ಮಾಯವಾಗಿದೆ. ಈ ಭೀಕರ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರಿಗೆ ಆತಂಕ ಶುರುವಾಗಿದೆ.
ಇಲ್ಲಿ ಧಾರಾಕಾರ ಮಳೆಯಿಂದಾಗಿ ಸಾಕಷ್ಟು ನೀರು ಸಂಗ್ರಹವಾಗಿತ್ತು. ಇದರಿಂದ ರಸ್ತೆಯಲ್ಲಿ ನಿಂತ ನೀರು ಹರಿದುಹೋಗಿರಲೇ ಇಲ್ಲ. ಇದರ ಪರಿಣಾಮ ಅಲ್ಲಿ ಇದ್ದ ಹೊಂಡ ನೀರು ನಿಂತದ್ದೇ ನೆವವಾಗಿ ಬಾಯ್ತೆರೆದುಬಿಟ್ಟಿದೆ.
ಈ ವೇಳೆ ಅಲ್ಲಿ ಮುಂದೆ ಕಾರು ನಿಲ್ಲಿಸಲಾಗಿದ್ದು, ನೀರು ತುಂಬಿ ಹೊಂಡ ಬಾಯ್ತೆರೆ ಪರಿಣಾಮ ಕಾರು ಹೊಂಡಕ್ಕೆ ಬಿದ್ದಿದೆ. ಜನರು ನೋಡು ನೋಡುತ್ತಿದ್ದಂತೆ ಕಾರು ಬಿದ್ದ ಪರಿಣಾಮ ಜನರು ಆತಂಕಪಟ್ಟಿದ್ದು, ಈ ವಿಡಿಯೋ ಚಿತ್ರಿಸಿ ಸಾಮಾಜಿಕ ಜಾಲತಾಣಗಳಿಗೆ ಹರಿಯಬಿಟ್ಟಿದ್ದಾರೆ.
Scary visuals from Mumbai's Ghatkoper area where a car drowned in few seconds. pic.twitter.com/BFlqcaKQBo
— Shivangi Thakur (@thakur_shivangi) June 13, 2021