ಹೊಸ ದಿಗಂತ ವರದಿ, ಮೈಸೂರು:
ನಗರದ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಲಲಿತಾದ್ರಿಪುರಂನ ನಿರ್ಜನ ಪ್ರದೇಶದಲ್ಲಿ ಕಳೆದ ತಿಂಗಳು ನಡೆದಿದ್ದ ವಿದ್ಯಾರ್ಥಿನಿ ಮೇಲಿನ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬoಧಿಸಿದoತೆ ಕೊನೆಗೂ ಸಂತ್ರಸ್ತೆ ನ್ಯಾಯಾಲಯಕ್ಕೆ 164 ಸ್ಟೇಟ್ ಮೆಂಟ್ ನೀಡಿದ್ದಾಳೆ.
ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬoಧಿದoತೆ ತಮಿಳುನಾಡಿ ತಿರಪೂರಿನ ನಿವಾಸಿಗಳಾದ ಏಳು ಮಂದಿ ಆರೋಪಿಗಳನ್ನು ಈಗಾಗಲೇ ಬಂಧಿಸಿರುವ ಪೊಲೀಸರು, ನ್ಯಾಯಾಲಯದಲ್ಲಿ ಕೇಸ್ ನಿಲ್ಲಬೇಕಾದರೆ ಸಂತ್ರಸ್ತೆ ಆರೋಪಿಗಳನ್ನು ಗುರುತಿಸಿ, ಪೊಲೀಸರಿಗೆ ಘಟನೆ ಕುರಿತು ಹೇಳಿಕೆಯನ್ನು ನೀಡಬೇಕಾಗಿತ್ತು. ಆಕೆಯ ಹೇಳಿಕೆಯೇ ಆರೋಪಿಗಳ ಮೇಲಿನ ಆರೋಪ ಸಾಭೀತಿಗೆ ಪ್ರಮುಖ ಸಾಕ್ಷಿಯಾಗುತ್ತಿತ್ತು. ಆದರೆ ಘಟನೆ ನಡೆದ ನಂತರ ಮೈಸೂರಿನ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಸಂತ್ರಸ್ತೆ ಪೊಲೀಸರಿಗೆ ಘಟನೆ ಕುರಿತು ಹೇಳಿಕೆ ನೀಡಲು ನಿರಾಕರಿಸುತ್ತಿದ್ದಳು. ಅಲ್ಲದೇ ಮೂರು ದಿನಗಳ ಕಾಲ ಚಿಕಿತ್ಸೆ ಪಡೆದು, ಆಸ್ಪತ್ರೆಯಿಂದ ಬಿಡುಗಡೆಯಾಗಿ, ತನ್ನ ಪೋಷಕರೊಂದಿಗೆ ಮುಂಬೈಗೆ ತೆರಳಿದ್ದಳು. ಅಲ್ಲಿ ಹೋದ ಬಳಿಕ ಸಂತ್ರಸ್ತೆ ಹಾಗೂ ಪೋಷಕರು ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದರು. ಇದು ಪೊಲೀಸರಿಗೆ ಭಾರೀ ತಲೆ ನೋವಾಗಿತ್ತು. ಘಟನೆಯಿಂದ ಆಘಾತಗೊಂಡಿರುವ ಆಕೆ, ಕೆಲ ದಿನಗಳ ಬಳಿಕ ಚೇತರಿಸಿಕೊಂಡು ಹೇಳಿಕೆ ನೀಡಬಹುದು ಎಂದು ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸರು ಕಾದಿದ್ದರು. ಆದರೆ ಸಂತ್ರಸ್ತೆ ಹಾಗೂ ಆಕೆಯ ಪೋಷಕರಿಂದ ಯಾವುದೇ ರೀತಿಯ ಸಹಕಾರ ದೊರೆಯುವ ಸಾಧ್ಯತೆಗಳು ಕಂಡು ಬಾರದ ಹಿನ್ನಲೆಯಲ್ಲಿ ಮುಂಬೈಗೆ ತೆರಳಿದ ಪೊಲೀಸರು, ಸಂತ್ರಸ್ತೆ ಹಾಗೂ ಆಕೆಯ ಪೋಷಕರನ್ನು ಪತ್ತೆ ಹಚ್ಚಿ, ಕೊನೆಗೂ ಅವರ ಮನವೊಲೈಸಲು ಸಫಲರಾದರು.
ಆಕೆ ಇದ್ದ ಸ್ಥಳದಲ್ಲೇ ಎರಡು ಕ್ಯಾಮರಾಗಳನ್ನು ಅಳವಡಿಸಿ, ವಿಡಿಯೋ ಕಾನ್ಫೆರೆನ್ಸ್ಗೆ ವ್ಯವಸ್ಥೆ ಮಾಡಿದರು. ಮೈಸೂರಿನ 3 ನೇ ಜೆಎಂಎಫ್ ಸಿ ನ್ಯಾಯಾಯದಲ್ಲಿ ಜಡ್ಜ್ ಮುಂದೆ ಸಂತ್ರಸ್ತೆಯು ಪ್ರಕರಣದ ಬಗ್ಗೆ ಹೇಳಿಕೆ ನೀಡಿದಳು. ಸುಮಾರು 45 ನಿಮಿಷಗಳ ಕಾಲ ನೀಡಿದ ಹೇಳಿಕೆಯನ್ನು ನ್ಯಾಯಾಧೀಶರು ಹಾಗೂ ಪೋಲಿಸ್ ತನಿಖಾಧಿಕಾರಿಗಳು ಟೈಪಿಸ್ಟ್ ಮೂಲಕ ದಾಖಲಿಸಿದರು. ನಂತರ ಆ ಹೇಳಿಕೆಯನ್ನು ಮುಚ್ಚಿದ ಲಕೋಟೆಯಲ್ಲಿ ಭದ್ರವಾಗಿಸಿದ್ದಾರೆ.
ಘಟನೆ ನಡೆದು 28 ದಿನದ ನಂತರ ಸಂತ್ರಸ್ತೆ ಕೋರ್ಟ್ ಗೆ ಸ್ಟೇಟ್ ಮೆಂಟ್ ನೀಡಿರುವ ಕಾರಣ ಗ್ಯಾಂಗ್ ರೇಪ್ ಕೇಸ್ ಮತ್ತಷ್ಟು ಗಟ್ಟಿಯಾಗಿದೆ. ಇದರಿಂದ ಪೋಲಿಸರು ನಿಟ್ಟುಸಿರು ಬಿಟ್ಟಿದ್ದಾರೆ. ಸಂತ್ರಸ್ತೆಯ ಹೇಳಿಕೆಯು ಗ್ಯಾಂಗ್ ರೇಪಿಸ್ಟ್ ಗಳ ಮೇಲಿನ ಆರೋಪವನ್ನು ಸಾಭೀತುಪಡಿಸಲು ಪೊಲೀಸರು ಪ್ರಮುಖ ಅಸ್ತ್ರವಾಗಲಿದೆ. ಆಕೆಯ ಹೇಳಿಕೆಯಿಂದ ಆರೋಪಿಗಳಿಗೆ ಶಿಕ್ಷೆಯಾಗಬಹುದು. ಸಂತ್ರಸ್ತೆ ನೀಡಿರುವ ಹೇಳಿಕೆಗೆ ಸಂಬoಧಿಸಿದ ಪೂರಕ ಸಾಕ್ಷ್ಯಗಳನ್ನು ತನಿಖೆ ನಡೆಸುತ್ತಿರುವ ಪೊಲೀಸರು ಈಗಾಗಲೇ ಸಂಗ್ರಹಿಸಿದ್ದಾರೆ. ಸಂತ್ರಸ್ತೆ ಕೊನೆಗೂ ಹೇಳಿಕೆ ನೀಡಿರುವ ಹಿನ್ನಲೆಯಲ್ಲಿ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಸಲ್ಲಿಸಲಾಗಿರುವ ಚಾರ್ಜ್ ಶೀಟ್ಗೆ ಈಗ ಮತ್ತಷ್ಟು ಬಲ ಬಂದoತಾಗಿದೆ.