ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………………………………
ಹೊಸ ದಿಗಂತ ವರದಿ, ಮೈಸೂರು:
ಮೈಸೂರಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಲು ಬಿಡುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ಗುರುವಾರ ನಗರದ ಲಲಿತಾಮಹಲ್ ಹೋಟೆಲ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಾಮುಂಡಿಬೆಟ್ಟದ ತಪ್ಪಲಿನ ಲಲಿತಾದ್ರಿಪುರಂನ ನಿರ್ಜನ ಪ್ರದೇಶದಲ್ಲಿ ನಡೆದ ವಿದ್ಯಾರ್ಥಿನಿ ಮೇಲಿನ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬoಧಿಸಿದoತೆ ಮೈಸೂರು ನಗರ ಪೊಲೀಸ್ ಅಧಿಕಾರಿಗಳ ತಲೆ ದಂಡವಾಗುವ ಕುರಿತು ಸುಳಿವು ನೀಡಿದರು.
ನಗರದಲ್ಲಿ ನಡೆದ ಶೂಟ್ ಔಟ್, ಗ್ಯಾಂಗ್ ರೇಪ್ ಪ್ರಕರಣದಲ್ಲಿ ಪೊಲೀಸ್ ನಿರ್ಲಕ್ಷ÷್ಯ ಎದ್ದುಕಂಡಿದೆ . ಪೊಲೀಸ್ ವೈಫಲ್ಯದ ಬಗ್ಗೆ ಜನತೆ ಅಸಮಧಾನ ವ್ಯಕ್ತಪಡಿಸುತ್ತಿದ್ದಾರೆ. ಸಾರ್ವಜನಿಕರ ಭಾವನೆಗೆ ಸರ್ಕಾರ ಸ್ಪಂದಿಸಬೇಕಾಗುತ್ತದೆ. ಗ್ಯಾಂಗ್ ರೇಪ್ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಪ್ರಕರಣದ ಪರಶೀಲನೆಗೆ ಎಡಿಜಿಪಿ ಅವರನ್ನೇ ಸರ್ಕಾರ ನಿಯೋಜಿಸಿದೆ. ಎಡಿಜಿಪಿ ವರದಿ ನಂತರ ನಿರ್ಲಕ್ಷದ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳುತ್ತದೆ. ಮೈಸೂರು ನಗರ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ಅನಿವಾರ್ಯವಾಗಿದೆ ಎಂದರು.
ಮೈಸೂರಿನ ಪ್ರತಿಷ್ಠಿತ ಲಲಿತ ಮಹಲ್ ಗೆ ಶತಮಾನೋತ್ಸವ ಸಂಭ್ರಮ ಅಂಗವಾಗಿ ಹಲವು ಕಾರ್ಯಕ್ರಮಗಳನ್ನ ಆಯೋಜನೆ ಮಾಡಲಾಗುತ್ತದೆ ಎಂದು ಇದೇ ವೇಳೆ ತಿಳಿಸಿದರು.
1921ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಲಲಿತ್ ಮಹಲ್ ನಿರ್ಮಾಣ ಮಾಡಿದ್ದಾರೆ. ಲಲಿತ್ ಮಹಲ್ ಮುಂಭಾಗ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ ನಿರ್ಮಾಣ ಮಾಡಲಾಗುತ್ತದೆ. ಮಹಾರಾಜರ ಕೊಡುಗೆ ಹಾಗೂ ಸಾಧನೆ ಸಾರುವಂತಹ ತಾತ್ಕಾಲಿಕ ಮ್ಯೂಸಿಯಂ ನಿರ್ಮಾಣ ಮಾಡುತ್ತೇವೆ ಎಂದರು.
ನವೆoಬರ್ 21ರಿಂದ 7 ದಿನಗಳ ಶತಮಾನೋತ್ಸವ ಕಾರ್ಯಕ್ರಮ ನಡೆಯಲಿದೆ. ಏಳು ದಿನಗಳ ಕಾಲ ಲೈಟ್ ಅಂಡ್ ಮ್ಯೂಸಿಕ್ ಕಾರ್ಯಕ್ರಮ ಸಾಂಸ್ಕöತಿಕ ಕಾರ್ಯಕ್ರಮ ನಡೆಯಲಿದ್ದು, ಸ್ಥಳೀಯರಿಗೆ ಅವಕಾಶ ನೀಡಲಾಗುತ್ತದೆ. ಕಾರ್ಯಕ್ರಮಕ್ಕೆ ಅನುದಾನ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಿದ್ದೇವೆ. ಅಕ್ಟೋಬರ್ ಒಳಗೆ ಕಟ್ಟಡದ ಬಣ್ಣ ಮತ್ತು ಇತರೆ ಕಾಮಗಾರಿ ಮುಕ್ತಾಯವಾಗಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪ್ರವಾಸೋದ್ಯಮ ಸಚಿವರು ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ ಎಂದರು.
ಮೈಸೂರು ನಗರಪಾಲಿಕೆಯ ಮೇಯರ್ ಆಗಿದ್ದ ಜೆಡಿಎಸ್ನ ರುಕ್ಮಿಣಿ ಮಾದೇಗೌಡರ ವಿರುದ್ಧ ಕಾಂಗ್ರೆಸ್ ನವರು ನ್ಯಾಯಾಲಯಕ್ಕೆ ಹೋಗಿ, ಅವರ ಅಧಿಕಾರವನ್ನು ರದ್ದುಪಡಿಸುವಂತೆ ಮಾಡಿದ್ದಾರೆ. ಹಾಗಾಗಿ ಬುಧವಾರ ನಡೆದ ಮೇಯರ್ ಸ್ಥಾನದ ಚುನಾವಣೆಯ ಸಂಬoಧವಾಗಿ ಜೆಡಿಎಸ್-ಕಾಂಗ್ರೆಸ್ನವರು ಜಗಳವಾಡಿದ್ದಾರೆ. ಬಿಜೆಪಿ ಇದರ ಲಾಭವನ್ನು ಪಡೆದಿದೆ. 26 ಸ್ಥಾನ ಹೊಂದಿರುವ ನಾವು ಮೇಯರ್ ಸ್ಥಾನವನ್ನು ಹಿಡಿದಿದ್ದೇವೆ. ಮೇಯರ್ ಸುನಂದಾ ಪಾಲನೇತ್ರ ಅವರಿಗೆ ಆಡಳಿತ ನಡೆಸಿದ ಅನುಭವವಿದೆ. ಹಾಗಾಗಿ ಅವರು ಮೇಯರ್ ಸ್ಥಾನದ ಆಡಳಿತವನ್ನು ಸಮರ್ಥವಾಗಿ ನಿಭಾಯಿಸುತ್ತಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಅರಣ್ಯ ವಸತಿ ಮತ್ತು ವಿಹಾರ ಧಾಮಗಳ ನಿಗಮದ ಅಧ್ಯಕ್ಷ ಅಪ್ಪಣ್ಣ, ನಗರಪಾಲಿಕೆಯ ಮೇಯರ್ ಸುನಂದಾ ಪಾಲನೇತ್ರ ಮತ್ತಿತರರು ಉಪಸ್ಥಿತರಿದ್ದರು.