Wednesday, August 10, 2022

Latest Posts

ನಂಜನಗೂಡಿನಲ್ಲಿ ನಕಲಿ ವೈದ್ಯನ ಬಂಧನ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸ ದಿಗಂತ ವರದಿ, ಮೈಸೂರು:

ಜಿಲ್ಲೆಯ ನಂಜನಗೂಡು ತಾಲೂಕಿನ ಹುರಾ ಗ್ರಾಮದಲ್ಲಿ ಕೊರೋನಾ ಸೋಂಕಿನ ನಡುವೆ ಅರ್ಹತೆಯಿಲ್ಲದಿದ್ದರೂ ಕ್ಲಿನಿಕ್ ತೆರೆದು ವೈದ್ಯ ವೃತ್ತಿ ನಡೆಸುತ್ತಿದ್ದ ನಕಲಿ ವೈದ್ಯನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಕೇರಳ ಮೂಲದ ಜೋಸೆಫ್ ಬಂಧಿತ ಆರೋಪಿ.
ಈತ ತಾನು ಆರ್ಯುವೇದಿಕ್ ವೈದ್ಯನೆಂದು ಹೇಳಿಕೊಂಡು ಗ್ರಾಮದಲ್ಲಿ ಕ್ಲಿನಿಕ್ ತೆರೆದು ರೋಗಿಗಳಿಗೆ ಅಲೋಪತಿ ಚಿಕಿತ್ಸೆ ನೀಡುತ್ತಿದ್ದ. ಕೊರೋನಾ ಸೋಂಕಿನ ಹರಡುವಿಕೆ ಸಂದರ್ಭದಲ್ಲಿ ಬೇಡಿಕೆ ಸೃಷ್ಠಿಸಿಕೊಂಡಿದ್ದ. ಈತನ ಬಗ್ಗೆ ವಿಷಯ ತಿಳಿದ ಆರೋಗ್ಯ ಇಲಾಖೆಯ ಅಧಿಕಾರಿಗಳು ಪೂರ್ವಪರ ಮಾಹಿತಿಯನ್ನು ಸಂಗ್ರಹಿಸಿದಾಗ, ಜೋಸೆಫ್ ನಕಲಿ ವೈದ್ಯ ಎಂಬುದು ಕಂಡು ಬಂದಿದೆ. ಕೂಡಲೇ ತಹಸೀಲ್ದಾರ್ ನೇತೃತ್ವದಲ್ಲಿ ಪೊಲೀಸರೊಂದಿಗೆ ದಾಳಿ ನಡೆಸಿ, ಆರೋಪಿಯನ್ನು ಬಂಧಿಸಿ, ಆತನ ಕ್ಲಿನಿಕ್‌ಗೆ ಬೀಗ ಜಡಿದರು. ಬಂಧಿತನು ನಕಲಿ ವೈದ್ಯನೆಂದು ತಿಳಿಯುತ್ತಿದ್ದಂತೆ ಆತನಿಂದ ಚಿಕಿತ್ಸೆಪಡೆದವರು, ಗ್ರಾಮಸ್ಥರು ಬೆಚ್ಚಿ ಬಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss