ಹೊಸ ದಿಗಂತ ವರದಿ , ಮಡಿಕೇರಿ:
ಹೆಜ್ಜೇನು ದಾಳಿಗೆ ಸಿಲುಕಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ನಾಪೋಕ್ಲು ಪಟ್ಟಣದಲ್ಲಿ ನಡೆದಿದೆ.
ನಾಪೋಕ್ಲು ಪಟ್ಟಣದ ಕೊಡವ ಸಮಾಜದ ರಸ್ತೆಯಲ್ಲಿ ಗುರುವಾರ ಸಂಜೆ ಹೆಜ್ಜೇನುಗಳು ರಸ್ತೆಯಲ್ಲಿ ಸಾಗುತ್ತಿದ್ದ ಜನರ ಮೇಲೆ ಏಕಾಏಕಿ ದಾಳಿ ಮಾಡಿವೆ. ತೀವ್ರ ದಾಳಿಗೊಳಗಾದ ಅಜ್ಜಿಮುಟ್ಟ ನಿವಾಸಿ ವೇಲಾಯುಧನ್ (68) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅನೇಕರು ಗಾಯಗೊಂಡಿದ್ದು, ಈ ಘಟನೆಯಿಂದ ಪಟ್ಟಣದಲ್ಲಿ ಆತಂಕದ ವಾತಾವರಣ ಮೂಡಿತ್ತು.