ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, August 6, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಬಾಯಾರಿದ ಬಾನಾಡಿಗೆ ನೆರವಾದ ಮಂಗಳೂರು‌‌ ಮಂದಿ: ಶುರುವಾಗಿದೆ ‘ನೀರಿಡಿ’ ನೂತನ ಅಭಿಯಾನ

ದಿಗಂತ ವರದಿ, ಮಂಗಳೂರು

ಹೆಚ್ಚುತ್ತಿರುವ ತಾಪಮಾನ ಮನುಷ್ಯರಿಗಷ್ಟೇ ಅಲ್ಲ, ಪ್ರಾಣಿ ಪಕ್ಷಿಗಳಿಗೂ ಬಾಧೆ ನೀಡುತ್ತಿದೆ. ಜಲ ಮೂಲಗಳು ಬತ್ತುತ್ತಿದ್ದು ನೀರಿಗಾಗಿ ಪ್ರಾಣಿ ಪಕ್ಷಿಗಳು ಪರಿತಪಿಸುವ ಸ್ಥಿತಿಯಿದೆ. ಮೂಕ ಪ್ರಾಣಿಗಳಿಗೆ ಧ್ವನಿಯಾಗುವ ಅಭಿಯಾನವೊಂದು ಮಂಗಳೂರಿನಲ್ಲಿ ನಡೆಯುತ್ತಿದೆ.
‘ಏಪ್ರಿಲ್ ಫೂಲ್’ ಬದಲು ಏಪ್ರಿಲ್ ಕೂಲ್’ ಆಚರಿಸಿ… ‘ಪಕ್ಷಿಗಳಿಗಾಗಿ ನೀರಿಡಿ’ ಎಂಬ ನೆಲೆಯಲ್ಲಿ ಜಾಗೃತಿ ಅಭಿಯಾನ ಸಾಗುತ್ತಿದೆ. ಪಕ್ಷಿಗಳ ದಾಹ ತಣಿಸುವ ಈ ಅಭಿಯಾನಕ್ಕೆ ವ್ಯಾಪಕ ಶ್ಲಾಘನೆಯೂ ವ್ಯಕ್ತವಾಗುತ್ತಿದೆ. ವಿಶೇಷವಾಗಿ ತಯಾರಿಸಿದ ಟಿನ್‌ಗಳಲ್ಲಿ ನೀರು ಮತ್ತು ಆಹಾರವನ್ನು ಇಟ್ಟು ಅದನ್ನು ಟೆರೇಸ್, ಪಾರ್ಕ್, ಮತ್ತು ಮರದ ಗೆಲ್ಲುಗಳಲ್ಲಿ ಇಡುವ ಕೆಲಸ ಸಾಗುತ್ತಿದೆ. ಇದು ಅಳಿಲು ಸೇರಿದಂತೆ ಪುಟ್ಟ ಪ್ರಾಣಿ, ಪಕ್ಷಿಗಳಿಗೆ ನೆರವಾಗಲಿದೆ.
ಇದು ಮೇಷ್ಟ್ರ ಕೆಲಸ!
ಈ ಕಲ್ಪನೆ ಹೊಳೆದದ್ದು ಅಡ್ಯಾರು ಸಹ್ಯಾದ್ರಿ ಕಾಲೇಜಿನ ಪ್ರಾಧ್ಯಾಪಕರಾಗಿರುವ ಅನಂತ ಜಿ. ಪ್ರಭು ಅವರಿಗೆ. ಸೈಬರ್ ಸೆಕ್ಯುರಿಟಿ ಮತ್ತು ಕಾನೂನು ತರಬೇತುದಾರರೂ ಆಗಿರುವ ಡಾ.ಅನಂತ ಪ್ರಭು ಮತ್ತು ವಿ ಆರ್ ಯುನೈಟೆಡ್ ಇದರ ಅಧ್ಯಕ್ಷ ಅಜ್‌ಫರ್ ರಝಾಕ್ ಸೇರಿಕೊಂಡು 50ಕ್ಕೂ ಅಧಿಕ ಕಡೆ ವಿಶೇಷ ರೀತಿಯಲ್ಲಿ ತಯಾರಿಸಿರುವ ಟಿನ್‌ಗಳನ್ನು ಇಡುವ ವ್ಯವಸ್ಥೆ ಮಾಡುತ್ತಿದ್ದಾರೆ. ಇದರೊಂದಿಗೆ ಸಾರ್ವಜನಿಕರನ್ನು ಜಾಗೃತಿಗೊಳಿಸುವ ಕೆಲಸವನ್ನೂ ಈ ತಂಡ ಮಾಡುತ್ತಿದೆ.
ಮರದಲ್ಲಿ ಸಿಕ್ಕಿಸಿಡಲು ಅನುಕೂಲವಾಗುವಂತೆ ಟಿನ್‌ಗಳನ್ನು ಮಾರ್ಪಾಡುಗೊಳಿಸಿ ಅದರಲ್ಲಿ ನೀರು ಮತ್ತು ಧಾನ್ಯಗಳನ್ನು ಇಡುವ ಕಾರ್ಯವಾ ಗುತ್ತಿದೆ. ಈ ರೀತಿಯ ವಿಶಿಷ್ಟವಾದ ಟಿನ್‌ಗಳನ್ನು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅವರಿಗೂ ಅನಂತ ಜಿ ಪ್ರಭು ಅವರು ನೀಡಿದ್ದು, ಜಾಗೃತಿಯ ಅಭಿಯಾನದಲ್ಲಿ ಕೈಜೋಡಿಸುವಂತೆ ಮನವಿ ಮಾಡಿದ್ದಾರೆ.
ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಪೊಲೀಸ್ ಆಯುಕ್ತರು ಜನತೆ ಕೂಡ ತಮ್ಮ ತಮ್ಮ ಮನೆಯ ಟೆರೇಸ್ ಮೇಲ್ಭಾಗದಲ್ಲಿ ಪಕ್ಷಿಗಳಿಗಾಗಿ ನೀರಿಡುವ ಕಾರ್ಯ ಮಾಡಬೇಕು ಎಂದು ಹೇಳಿದ್ದಾರೆ. ಅಲ್ಲದೆ ಡಾ. ಅನಂತ ಜಿ ಪ್ರಭು ನೇತೃತ್ವದ ತಂಡದ ಕಾರ್ಯವನ್ನು ಶ್ಲಾಘಿಸಿದ್ದಾರೆ.
‘ಪಾರ್ಕ್, ಫ್ಲ್ಯಾಟ್ ಸೇರಿದಂತೆ ಹಲವೆಡೆ ಈ ರೀತಿಯ ನೀರು ಮತ್ತು ಆಹಾರದ ಟಿನ್‌ಗಳನ್ನಿಡುವ ಕಾಯಕದಲ್ಲಿ ತೊಡಗಿಕೊಂಡಿದ್ದೇವೆ. ಸಾರ್ವಜನಿಕರೂ ಕೂಡ ಈ ನೆಲೆಯಲ್ಲಿ ಜಾಗೃತರಾಗಬೇಕು. ಉರಿ ಬಿಸಿಲಿನ ಈ ಸಮಯದಲ್ಲಿ ಮೂಕ ಪ್ರಾಣಿಗಳಿಗೆ ನಾವು ಆಸರೆಯಾಗಬೇಕು’ ಎನ್ನುತ್ತಾರೆ ಅನಂತ ಜಿ ಪ್ರಭು.
ಗೂಗಲ್ ಮಾರ್ಕ್
ನೀರು ಮತ್ತು ಆಹಾರದ ಟಿನ್ ಇಟ್ಟ ಕಡೆಯಲ್ಲೆಲ್ಲಾ ಗೂಗಲ್ ಮಾರ್ಕ್ ಮಾಡಿದ್ದೇವೆ. ಟೆಕ್ನಾಲಜಿ ಬಳಸಿ ಇಟ್ಟಿರುವ ಟಿನ್‌ಗಳಲ್ಲಿ ನೀರು ಮತ್ತು ಆಹಾರ ಖಾಲಿಯಾಗಿದೆಯೇ ಎಂಬುದನ್ನೂ ಖಾತರಿಪಡಿಸಲಾಗುತ್ತದೆ. ಖಾಲಿಯಾದ ತಕ್ಷಣ ಮತ್ತು ತುಂಬಿಸುವ ಕಾರ್ಯ ಆಗಲಿದೆ. ಪ್ರತಿಯೊಬ್ಬರೂ ತಮ್ಮ ಮನೆಯ ಸುತ್ತ ಮುತ್ತ ಒಂದಷ್ಟು ಧಾನ್ಯ, ನೀರನ್ನು ಇಟ್ಟರೆ ಮೂಕ ಜೀವಿಗಳಿಗೆ ಅದುವೇ ಅಮೃತವಾದೀತು ಎನ್ನುತ್ತಾರೆ ಪ್ರಾಧ್ಯಾಪಕರಾದ ಡಾ.ಅನಂತ ಜಿ ಪ್ರಭು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss