ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………
ಹೊಸ ದಿಗಂತ ವರದಿ, ಕಲಬುರಗಿ:
ಜಿಲ್ಲೆಯಾದ್ಯಂತ ಭಾರಿ ಮಳೆ ಸುರಿಯುತ್ತಿದೆ. ಎಲ್ಲಾ ನದಿ ಹಳ್ಳಗಳು ತುಂಬಿ ಹರಿಯುತ್ತಿವೆ. ಈ ನಡುವೆ ಜೀವದ ಹಂಗು ತೊರೆದು ತುಂಬಿ ಹರಿಯುತ್ತಿರುವ ಹಳ್ಳದ ಮಧ್ಯದಿಂದ ಸ್ಮಶಾನದತ್ತ ಶವ ಹೊತ್ತೊಯ್ದ ಘಟನೆ ಕಾಳಗಿ ತಾಲೂಕಿನ ಚಿಂಚೋಳಿ (ಎಚ್) ಗ್ರಾಮದಲ್ಲಿ ನಡೆದಿದೆ.
ಗ್ರಾಮದಲ್ಲಿ ಬ್ರಿಜ್ ಕಾಮಗಾರಿ ಪೂರ್ಣಗೊಳ್ಳದ ಹಿನ್ನಲೆ ಹಳ್ಳದ ಹಳೆ ಸೇತುವೆ ಮೇಲೆಯೆ ನಿತ್ಯವು ಜೀವದ ಹಂಗು ತೊರೆದು ಜನರು ಓಡಾಟ ಮಾಡುತ್ತಿದ್ದಾರೆ.
ಗ್ರಾಮದಲ್ಲಿ ಯಾರೇ ಮೃತಪಟ್ಟರು ತುಂಬಿ ಹರಿಯುವ ಹಳ್ಳದ ಮಧ್ಯದಿಂದ ಸ್ಮಶಾನದತ್ತ ಶವ ಹೊತ್ತೊಯುವ ಅನಿವಾರ್ಯತೆ ಗ್ರಾಮಸ್ಥರಿಗಿದೆ. ಸದ್ಯ ಜಿಲ್ಲೆಯಲ್ಲಿ ವರುಣ ಅಬ್ಬರಿಸುತ್ತಿದ್ದು, ಚಿಂಚೋಳಿ (ಎಚ್) ಗ್ರಾಮದ ಹಳ್ಳ ತುಂಬಿ ಹರಿಯುತ್ತಿದೆ. ಹೀಗಿರುವಾಗಲೇ ಜೀವದ ಹಂಗು ತೊರೆದು ಮೃತರ ದೇಹವನ್ನು ತುಂಬಿ ಹರಿಯುವ ಹಳ್ಳದಲ್ಲಿಯೇ ಗ್ರಾಮಸ್ಥರು ಹೊತ್ತೊಯುವ ದುಸ್ಸಾಹಸ ಮಾಡಿದ್ದಾರೆ.
ಕೊಂಚ ಯಾಮಾರಿದ್ರೂ ಜೀವ ನೀರುಪಾಲು ಆಗೋದರಲ್ಲಿ ಯಾವುದೆ ಅನುಮಾನ ಇಲ್ಲ, ಹೀಗಿದ್ದರೂ ಹಳ್ಳದಲ್ಲಿ ಓಡಾಡುವ ಅನುವಾರ್ಯತೆ ಇದೆ ಎನ್ನುವುದು ಗ್ರಾಮಸ್ಥರು ಹೇಳಿದ್ದಾರೆ.