ಹಣವಿಲ್ಲದೆ ಪ್ರಾಣಿಗಳ ಮಾರಾಟಕ್ಕಿಳಿದ ಪಾಕ್:‌ ಅಚ್ಚರಿಯೆಂದರೆ, ಎಮ್ಮೆಗಿಂತಲೂ ಸಿಂಹಕ್ಕೆ ಬೆಲೆ ಕಡಿಮೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್
ಒಂದೆಡೆ  ಪಾಕ್ ವಿದೇಶಿ ಸಾಲ ಏರುತ್ತಿದ್ದರೆ, ಮತ್ತೊಂದೆಡೆ ವಿದೇಶಿ ವಿನಿಮಯ ಮೀಸಲು ಮೀಸಲು ಬರಿದಾಗುತ್ತಿದೆ.  ಪಾಕ್‌ ಪ್ರತಿಯೊಂದಕ್ಕೂ ಚೀನಾದತ್ತ ಕಡೆ ಮುಖಮಾಡುವ ಸ್ಥಿತಿಯಲ್ಲಿದೆ. ಅತ್ಯಂತ ಕೆಟ್ಟ ಆರ್ಥಿಕ ಹಂತದತ್ತ ಸಾಗುತ್ತಿರುವ ಪಾಕ್‌ನಲ್ಲಿ ಇದೇ ಪರಿಸ್ಥಿತಿ ಮುಂದುವರಿದರೆ ಪಾಕ್‌ ಮತ್ತೊಂದು ಶ್ರೀಲಂಕಾವಾಗಿ ಆರ್ಥಿಕ ಹಿಂಜರಿತಕ್ಕೆ ಬಲಿಯಾಗುವ ದಿನ ದೂರವಿಲ್ಲ ಎಂಬುದು ತಜ್ಞರ ಅಭಿಪ್ರಾಯ.
ಆರ್ಥಿಕ ಬಿಕ್ಕಟ್ಟು ಪಾಕಿಸ್ತಾನವನ್ನು ಎಷ್ಟರ ಮಟ್ಟಿಗೆ ಕಂಗೆಡಿಸಿದೆಯೆಂದರೆ, ಅಲ್ಲಿನ ಮೃಗಾಲಯಗಳು ತಮ್ಮಲ್ಲಿನ ವನ್ಯ ಜೀವಿಗಳನ್ನು ಮಾರಾಟ ಮಾಡಲಾರಂಭಿಸಿವೆ. ಲಾಹೋರ್ ನಲ್ಲಿರುವ ಸಫಾರಿ ಮೃಗಾಲಯದ ಆಡಳಿತವು ಪ್ರಾಣಿಗಳ ನಿರ್ವಹಣೆಯ ವೆಚ್ಚ ಸರಿದೂಗಿಸಲು ತನ್ನಲ್ಲಿನ 12 ಆಫ್ರಿಕನ್ ಸಿಂಹಗಳನ್ನು ಆಗಸ್ಟ್‌ ಮೊದಲ ವಾರದಲ್ಲಿ ಮಾರಾಟ ಮಾಡಲು ಸಿದ್ಧತೆ ನಡೆಸಿದೆ. ಆದರೆ ಅಚ್ಚರಿಯ ಸಂಗತಿಯೆಂದರೆ, ಇಲ್ಲಿನ ಸಿಂಹಗಳಿಗೆ ಎಮ್ಮೆಗಳಿಗಿಂತ ಕಡಿಮೆ ಬೆಲೆಯನ್ನು ನಿಗದಿ ಪಡಿಸಲಾಗಿದೆ!
ಹೌದು.. ಪ್ರತಿ ಸಿಂಹಕ್ಕೆ ರೂ 1.5 ಲಕ್ಷ ಪಾಕಿಸ್ತಾನಿ ರು. (ಭಾರತದ ರುಪಾಯಿಯಲ್ಲಿ 57,೦೦೦) ನಿಗದಿ ಪಡಿಸಲಾಗಿದೆ.
ಇದಕ್ಕೆ ಹೋಲಿಸಿದರೆ, ಆನ್‌ಲೈನ್ ಮಾರುಕಟ್ಟೆಯಲ್ಲಿ ಎಮ್ಮೆಗಳಿಗೆ 3.5 ಲಕ್ಷದಿಂದ 1 ಮಿಲಿಯನ್ ವರೆಗೆ ಭಾರೀ ಮೊತ್ತವಿದೆ.  ಆದರೆ, ಸಿಂಹಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿರುವುದರ ಹಿಂದಿನ ಕಾರಣವೇನು ತಿಳಿದುಬಂದಿಲ್ಲ.
ಲಾಹೋರ್‌ನ ಸಫಾರಿ ಮೃಗಾಲಯವು ದೇಶದ ದೊಡ್ಡ ಪ್ರಾಣಿ ಸಂಗ್ರಹಾಲಯಗಗಳಲ್ಲಿ ಒಂದಾಗಿದೆ. 142 ಎಕರೆಗಳಷ್ಟು ವಿಸ್ತಾರವಾಗಿರುವ ಇದರಲ್ಲಿ ಅನೇಕ ಕಾಡು ಪ್ರಾಣಿಗಳಿಗೆ ಆಶ್ರಯ ನೀಡಲಾಗಿದೆ. ಇದರಲ್ಲಿ 40ಕ್ಕೂ ಹೆಚ್ಚಿನ ಸಿಂಹಗಳಿವೆ.
ಅವುಗಳನ್ನು ನಿರ್ವಹಿಸುವುದು ಕಷ್ಟ. ಮಾತ್ರವಲ್ಲದೆ ಸಾಕಷ್ಟು ದುಬಾರಿಯಾಗಿದೆ. ಆದ್ದರಿಂದ, ಅಧಿಕಾರಿಗಳು ನಿಯಮಿತವಾಗಿ ಕೆಲವು ಸಿಂಹಗಳನ್ನು ಮಾರಾಟ ಮಾಡಿ ಮೃಗಾಲಯದ ಆದಾಯ- ವೆಚ್ಚಗಳನ್ನು ಸರಿದೂಗಿಸುತ್ತಿದ್ದಾರೆ. ಕಳೆದ ವರ್ಷ ಸಫಾರಿ ಮೃಗಾಲಯದಲ್ಲಿ ಸೀಮಿತ ಸ್ಥಳಾವಕಾಶದ ನೆಪದಲ್ಲಿ 14 ಸಿಂಹಗಳನ್ನು ನಾಗರಿಕರಿಗೆ ಮಾರಾಟ ಮಾಡಲಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!