Wednesday, August 10, 2022

Latest Posts

ಶಿವಮೊಗ್ಗದಲ್ಲಿ ಈ ಬಾರಿ 9 ದಿನಗಳ ಕಾಲ ದಸರಾ ಉತ್ಸವ ಆಚರಿಸಲು ನಿರ್ಧಾರ

ಹೊಸ ದಿಗಂತ ವರದಿ, ಶಿವಮೊಗ್ಗ:

ಮಹಾನಗರ ಪಾಲಿಕೆ ವತಿಯಿಂದ ಈ ಬಾರಿ 09 ದಿನಗಳ ಕಾಲ ದಸರಾ ಉತ್ಸವ ಆಚರಿಸಲು ನಿರ್ಧರಿಸಲಾಗಿದೆ.
ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಬುಧವಾರ ಸಂಜೆ ನಡೆದ ದಸರಾ ಪೂರ್ವಭಾವಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಕೋವಿಡ್ ಮಾರ್ಗಸೂಚಿಗಳನ್ನು 09 ದಿನಗಳ ಕಾಲ ದಸರಾ ಆಚರಿಸುವುದು. ಮಾರ್ಗಸೂಚಿಯ ನಿಯಮಗಳ ಘೋಷಣೆ ಬಳಿಕ ಅದ್ಧೂರಿ ಅಥವಾ ಸರಳವಾಗಿ ಆಚರಿಸೋಣ ಎಂದು ಪಾಲಿಕೆ ಮೇಯರ್ ಸುನೀತ ಅಣ್ಣಪ್ಪ ಪ್ರಕಟಿಸಿದರು.
ಸಭೆ ಆರಂಭದಲ್ಲಿ ಸದಸ್ಯರಾದ ಯೋಗೀಶ್, ನಾಗರಾಜ ಕಂಕಾರಿ ಮಾತನಾಡಿ, ಈ ಬಾರಿ ದಸರಾಗೆ ಎಷ್ಟು ಮೊತ್ತ ದೊರೆಯಲಿದೆ ಎಂಬುದನ್ನು ಪ್ರಕಟಿಸಿ. ಜೊತೆಗೆ ಕೋವಿಡ್ ಮಾರ್ಗಸೂಚಿ ಬದಲಾವಣೆಯಾದರೆ ಹೇಗೆ ಎಂದು ಪ್ರಶ್ನಿಸಿದರು.
ಪಾಲಿಕೆ ಆಯುಕ್ತ ಚಿದಾನಂದ ವಟಾರೆ ಇದಕ್ಕೆ ಉತ್ತರಿಸಿ, ದಸರಾ ಆಚರಣೆಗೆ ಬಗ್ಗೆ ಸರ್ಕಾರದಿಂದ ಈವರೆಗೆ ಯಾವುದೇ ಮಾರ್ಗಸೂಚಿ ಇನ್ನೂ ಪ್ರಕಟವಾಗಿಲ್ಲ. ಆದರೆ ನಗರ ವ್ಯಾಪ್ತಿಯಲ್ಲಿ ಈಗಲೂ ಕೊರೋನ ಪ್ರಕರಣಗಳು ವರದಿಯಾಗುತ್ತಿವೆ. ನಗರದಲ್ಲಿ ಈಗಲೂ 16 ಕಂಟೋನ್ಮೆಂಟ್ ವಲಯಗಳಿವೆ. ಅದರಲ್ಲಿ 03 ವಲಯದಲ್ಲಿ 05 ಕ್ಕಿಂತ ಹೆಚ್ಚು ಸಕ್ರಿಯ ಪ್ರಕರಣಗಳಿವೆ. ಮಂಗಳವಾರ ಕೂಡಾ 10 ಪ್ರಕರಣ ವರದಿಯಾಗಿದೆ. 78 ಸಕ್ರಿಯ ಪ್ರಕರಣಗಳಿವೆ ಎಂದು ತಿಳಿಸಿದರು.
ಇನ್ನು ಪಾಲಿಕೆ ಬಜೆಟ್‌ನಲ್ಲಿ ದಸರಾ ಆಚರಣೆಗೆ 50 ಲಕ್ಷ ರೂ. ಕಾಯ್ದಿರಿಸಲಾಗಿದೆ. ರಾಜ್ಯ ಸರ್ಕಾರಕ್ಕೆ ಮೇಯರ್ ನೇತೃತ್ವದಲ್ಲಿ 2 ಕೋಟಿ ರೂ. ದಸರಾ ಆಚರಣೆಗೆ ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಈಗಲೂ ಅವಕಾಶ ಇಲ್ಲ. ಯಾವುದೇ ಕಾರ್ಯಕ್ರಮದಲ್ಲಿ 400 ಕ್ಕಿಂತ ಹೆಚ್ಚು ಜನರು ಭಾಗವಹಿಸಲು ಅವಕಾಶ ಇಲ್ಲ ಎಂದರು.
ಆಡಳಿತ ಪಕ್ಷದ ನಾಯಕ ಚೆನ್ನಬಸಪ್ಪ ಮಾತನಾಡಿ, ಕೋವಿಡ್ ಮಾರ್ಗಸೂಚಿ ಅನುಸರಿಸಿ ವೈಭವದ ದಸರಾ ಆಚರಣೆ ಮಾಡೋಣ ಎಂದು ಸಲಹೆ ನೀಡಿದರು.
ಉಪಮೇಯರ್ ಶಂಕರ್ ಗನ್ನಿ ಸೇರಿದಂತೆ ಸದಸ್ಯರು ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss