ಹೊಸ ದಿಗಂತ ಆನ್ ಲೈನ್:
ಐಸಿಸಿ ಟೆಸ್ಟ್ ಚಾಂಪ್ಯನ್ಶಿಪ್ನ ಫೈನಲ್ ಪಂದ್ಯವನ್ನು ಸೌತಾಂಪ್ಟನ್ನ ಹ್ಯಾಂಪ್ಶೈರ್ ಬೌಲ್ ಕ್ರೀಡಾಂಗಣದಲ್ಲಿ ಆಡಲಾಗುವುದು ಎಂದು ಐಸಿಸಿ ಅಧಿಕೃತವಾಗಿ ಪ್ರಕಟಿಸಿದೆ. ಮೊದಲಿಗೆ ಲಾರ್ಡ್ಸ್ನಲ್ಲಿ ಈ ಪಂದ್ಯ ನಡೆಯವುದೆಂದು ನಿಗದಿಪಡಿಸಲಾಗಿತ್ತು.
ಫೈನಲ್ ಪಂದ್ಯದಲ್ಲಿ ಭಾರತವು ನ್ಯೂಜಿಲೆಂಡನ್ನು ಎದುರಿಸಲಿದೆ.
“ಇಂಗ್ಲೆಂಡ್ ವೇಲ್ಸ್ ಕ್ರಿಕೆಟ್ ಮಂಡಳಿ ಜತೆಗೆ ಸಮಾಲೋಚನೆ ನಡೆಸಿದ ಬಳಿಕ ಫೈನಲ್ ಪಂದ್ಯದ ಜಾಗ ಬದಲಿಸಲು ನಿರ್ಧರಿಸಲಾಯಿತು. ಕೋವಿಡ್ ಕಾರಣದಿಂದಾಗಿ ಸುರಕ್ಷಿತ ತಾಣವಾಗಿ ಸೌತಾಂಪ್ಟನ್ನ್ನು ಕೊನೆಗೆ ಆರಿಸಲಾಯಿತು” ಎಂಬುದಾಗಿ ಐಸಿಸಿ ತಿಳಿಸಿದೆ.
ಸೌತಾಂಪ್ಟನ್ನಲ್ಲಿ ವಿಶ್ವದರ್ಜೆಯ ತರಬೇತಿ ವ್ಯವಸ್ಥೆಯಿದೆ. ಆಟಗಾರರಿಗೆ ಉತ್ತಮ ಬಯೋಬಬಲ್ ವ್ಯವಸ್ಥೆ ಕಲ್ಪಿಸುವ ಸೌಲಭ್ಯ ಹೊಂದಿದೆ. ಆಟಗಾರರಿಗೆ ಕೋವಿಡ್ನ ರಿಸ್ಕ್ ಇದರಿಂದ ಕಡಿಮೆಯಾಗಲಿದೆ ಎಂದು ಐಸಿಸಿ ತಿಳಿಸಿದೆ.
ಒಂದು ವೇಳೆ ಫೈನಲ್ ಪಂದ್ಯದ ವೇಳೆಗೆ ಇಂಗ್ಲೆಂಡ್ನಲ್ಲಿ ಕೋವಿಡ್ ಪರಿಸ್ಥಿತಿ ಸುಧಾರಿಸಿದರೆ ಸೀಮಿತ ಸಂಖ್ಯೆ ಪ್ರೇಕ್ಷಕರಿಗೆ ಅವಕಾಶ ನೀಡುವ ಸಾಧ್ಯತೆಗಳಿವೆ.